Friday, June 5, 2026
Homeಕರಾವಳಿಉಡುಪಿಗ್ರಹಣ ಕಾಲದಲ್ಲಿ ಕೃಷ್ಣ ಮಠದಲ್ಲಿ ಉಪವಾಸ ಆಚರಣೆ: ಉಡುಪಿಯಲ್ಲಿ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಹೇಳಿಕೆ

ಗ್ರಹಣ ಕಾಲದಲ್ಲಿ ಕೃಷ್ಣ ಮಠದಲ್ಲಿ ಉಪವಾಸ ಆಚರಣೆ: ಉಡುಪಿಯಲ್ಲಿ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಹೇಳಿಕೆ

- Advertisement -
- Advertisement -

ಉಡುಪಿ: ಸೂರ್ಯ ಗ್ರಹಣದ ಆಚರಣೆ ಅವಶ್ಯಕವಾಗಿ ಮಾಡಬೇಕು ಎಂದು ಪರ್ಯಾಯ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಗ್ರಹಣ ಕಾಲದಲ್ಲಿ ಕೃಷ್ಣ ಮಠದಲ್ಲಿ ಉಪವಾಸ ಆಚರಣೆ ಇರುತ್ತದೆ, ಗ್ರಹಣ ದಿನ ಕೃಷ್ಣಮಠದಲ್ಲಿ ರಾತ್ರಿ ಮಹಾಪೂಜೆ ಇರುವುದಿಲ್ಲ, ಮಠದಲ್ಲಿ ಆಹಾರ ಮತ್ತು ಭೋಜನ ಇರುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಭಕ್ತರಿಗೂ ಗ್ರಹಣ ದಿನ ಅನ್ನ ಪ್ರಸಾದ ಇರುವುದಿಲ್ಲ ಮತ್ತುಗ್ರಹಣ ನಂತರ ಯಾವುದೇ ಪೂಜೆ ಪುನಸ್ಕಾರ ಇರುವುದಿಲ್ಲ, ಗ್ರಹಣ ದಿನ ಕೃಷ್ಣ ಮಠ ಸಂಪೂರ್ಣ ತೆರೆದಿರುತ್ತದೆ ಎಂದು ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಅಲ್ಲದೇ ದೇಹದಾರ್ಡ್ಯತೆ ಇದ್ದವರು, ಆರೋಗ್ಯವಂತರು ಕಡ್ಡಾಯವಾಗಿ ಉಪವಾಸ ಮಾಡಿ, ಮಧ್ಯಾಹ್ನ 2 ಗಂಟೆಯ ನಂತರ ಆಹಾರ ಸ್ವೀಕಾರ ಮಾಡಬೇಡಿ ಮತ್ತು ಗ್ರಹಣ ದಿನ ಜಪ, ತಪ, ಧ್ಯಾನ, ದಾನ ಧರ್ಮ ಮಾಡಬೇಕು ಎಂದು ಕಾಣಿಯೂರು ಮಠಾಧೀಶರು ತಿಳಿಸಿದ್ದಾರೆ.

- Advertisement -

Latest News

error: Content is protected !!