Thursday, July 16, 2026
Homeತಾಜಾ ಸುದ್ದಿ‘ಕೆಜಿಎಫ್ 2’ ದಾಖಲೆ ಮುರಿದ ‘ಕಾಂತಾರʼ

‘ಕೆಜಿಎಫ್ 2’ ದಾಖಲೆ ಮುರಿದ ‘ಕಾಂತಾರʼ

- Advertisement -
- Advertisement -

ಕಾಂತಾರ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೊಸ ಹೊಸ ದಾಖಲೆ ಬರೆದು ಮುಂದೆ ಸಾಗುತ್ತಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ನಿರ್ಮಾಣದ ಕೆಜಿಎಫ್‌-೨ ಮಾಡಿದ್ದ ದಾಖಲೆಯನ್ನು ‘ಕಾಂತಾರ’ ಸಿನಿಮಾ ಮುರಿದಿದೆ. ಈ ಮೂಲಕ ಮತ್ತಷ್ಟು ರೆಕಾರ್ಡ್​ ಸೃಷ್ಟಿ ಮಾಡುವ ಸಾಧ್ಯತೆ ಗೋಚರವಾಗಿದೆ.

ಈವರೆಗೂ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಒಟ್ಟು ಗಳಿಕೆ 200 ಕೋಟಿ ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲೇ ಅದು ನೂರು ಕೋಟಿ ಗಳಿಕೆ ಮಾಡಿದೆ. ಬಾಲಿವುಡ್ ನಲ್ಲೂ ಕಾಂತಾರ ಹಿಂದೆ ಬಿದ್ದಿಲ್ಲ. ಹಿಂದಿಯಲ್ಲಿ ಈವರೆಗೂ 22.25 ಕೋಟಿ ಹಣ ಹರಿದು ಬಂದಿದೆಯಂತೆ. ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಸಿನಿಮಾವೊಂದು ಈ ಪರಿ ಗಳಿಕೆ ಮಾಡಿದ ಹೆಗ್ಗಳಿಕೆ ಕಾಂತಾರದ್ದು.

- Advertisement -

Latest News

error: Content is protected !!