- Advertisement -
![]()
- Advertisement -
ಉಡುಪಿ: ಶ್ರೀಕೃಷ್ಣ ಮಠ ದರ್ಶನಕ್ಕೆ ಬಂದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿದ್ದ ಪರ್ಸ್ ಕಳವು ಮಾಡಿರುವ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ರಾಜರಾಜೇಶ್ವರಿ ನಗರದ ಸುಧಾ ಪರಿಮಳ (52) ಎಂಬವರು ಕುಟುಂಬದವರೊಂದಿಗೆ ನಿನ್ನೆ ಬೆಳಗ್ಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಪಡೆಯಲು ಒಳಗೆ ಹೋಗಿದ್ದರು.
ಈ ವೇಳೆ ದುಷ್ಕರ್ಮಿಗಳು ಇವರ ಹ್ಯಾಂಡ್ ಬ್ಯಾಗ್‌ನ ಜಿಪ್ ತೆಗೆದು, ಅದರೊಳಗಿದ್ದ ಪರ್ಸ್ ಕಳವು ಮಾಡಿದ್ದಾರೆಂದು ದೂರಲಾಗಿದೆ.
ಪಸ್‌ನಲ್ಲಿ ಚಿನ್ನದ ಕರಿಮಣಿ ಸರ, 4500ರೂ. ನಗದು, ಎಟಿಎಂ ಕಾರ್ಡ್, ಆಧಾರ್ ಕಾರ್ಡ್‌ಗಳಿದ್ದವು. ಇವುಗಳ ಒಟ್ಟು ಮೌಲ್ಯ 1,24,500 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


