Thursday, June 4, 2026
Homeಕರಾವಳಿಕಡಬ; ಮಕ್ಕಳಿಲ್ಲ ಎಂಬ ಕೊರಗಿನಿಂದ ವೃದ್ಧ ಆತ್ಮಹತ್ಯೆ

ಕಡಬ; ಮಕ್ಕಳಿಲ್ಲ ಎಂಬ ಕೊರಗಿನಿಂದ ವೃದ್ಧ ಆತ್ಮಹತ್ಯೆ

- Advertisement -
- Advertisement -

ಕಡಬ; ಮಕ್ಕಳಿಲ್ಲ ಎಂಬ ಕೊರಗಿನಿಂದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ‌‌ ಕೊಯಿಲದಲ್ಲಿ‌ ನಡೆದಿದೆ.ಕೊಯಿಲ ಗ್ರಾಮದ ಗುಲ್ಗೋಡಿ ನಿವಾಸಿ ತಿಮ್ಮಪ್ಪ ಗೌಡ (7೦) ಆತ್ಮಹತ್ಯೆ ಮಾಡಿಕೊಂಡವರು.

ಇವರು ರಬ್ಬರ್ ಟ್ಯಾಪರ್ ಆಗಿದ್ದು, ಇತ್ತೀಚೆಗೆ ಕೊಯಿಲದ ರೊಟ್ಟಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಮಕ್ಕಳಿಲ್ಲದ ಪರಿಣಾಮ ಅದೇ ಕೊರಗಿನಲ್ಲಿ ಮದ್ಯವ್ಯಸನಿಯಾಗಿದ್ದರು. ವಿಪರೀತ ಕುಡಿತದ ಚಟ ಇದ್ದುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿದ್ದ ಮೃತರು ಪತ್ನಿ ಕಮಲ ಅವರು ಬ್ಯಾಂಕಿಗೆ ಹೋಗಿದ್ದ ವೇಳೆ  ಮನೆಯ ಪಕ್ಕದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬಂಧಿ ಪ್ರಶಾಂತ್ ಕೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕಡಬ ಠಾಣಾ ಎಎಸ್‌ಐ ಚಂದ್ರಶೇಖರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!