Thursday, June 4, 2026
Homeಕರಾವಳಿಧರ್ಮಸ್ಥಳ; ಕನ್ಯಾಡಿಯಲ್ಲಿ‌ ಆಕಸ್ಮಿಕವಾಗಿ‌ ಕೆರೆಗೆ‌ ಬಿದ್ದು ವ್ಯಕ್ತಿ ಸಾವು

ಧರ್ಮಸ್ಥಳ; ಕನ್ಯಾಡಿಯಲ್ಲಿ‌ ಆಕಸ್ಮಿಕವಾಗಿ‌ ಕೆರೆಗೆ‌ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ: ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ  ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಸಂಭವಿಸಿದೆ.

  ಸುಂದರ (40) ಮೃತ‌ ದುರ್ದೈವಿ. ಇವರು ವಿಪರೀತ ಮದ್ಯದ ಚಟ ಹೊಂದಿದ್ದು ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ಇವರಿಗಾಗಿ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ ಇವರ ಮೃತದೇಹ ಧರ್ಮಸ್ಥಳ‌ ಗ್ರಾಮದ ಕನ್ಯಾಡಿಯ ಮತ್ತಿಲ ಎಂಬಲ್ಲಿನ ನಿವಾಸಿ ಅಚ್ಚುತರಾವ್ ಎಂಬವರ ಅಡಿಕೆ ತೋಟದಲ್ಲಿನ ತೆರೆದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಡಿದು ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರಬಹುದು ಎಂದು ಅನುಮಾನಿಸಲಾಗಿದ್ದು ಮೃತರ ತಾಯಿ ಸೀತು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!