Saturday, June 6, 2026
Homeಕರಾವಳಿಉಡುಪಿಕಾರ್ಕಳ:ರಬ್ಬರ್ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

ಕಾರ್ಕಳ:ರಬ್ಬರ್ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

- Advertisement -
- Advertisement -

ಕಾರ್ಕಳ: ಸುಟ್ಟ ಸ್ಥಿತಿಯಲ್ಲಿ ರಬ್ಬರ್ ತೋಟದಲ್ಲಿ ಕಾರ್ಮಿಕನ ಮೃತದೇಹ ಪತ್ತೆಯಾಗಿರುವ ಘಟನೆ  ಕಾರ್ಕಳದ ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೇರಳ ಮಲಪ್ಪುರಂ ನಿವಾಸಿ ಗೋಪಿ (60) ಎಂದು ಗುರುತಿಸಲಾಗಿದೆ. ರಬ್ಬರ್ ಪ್ಲಾಂಟೇಶನ್‌ಗೆ ಹುಲ್ಲು ಕಟ್ಟಿಂಗ್ ಮಾಡಲು ವಸಂತ ಎಂಬವರು ಆಗಮಿಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹದ ಹತ್ತಿರ ಸಿಗರ್ ಲೈಟರ್ ಹಾಗೂ ಪೆಟ್ರೋಲ್ ಕ್ಯಾನಿನ ಮುಚ್ಚಳ ಕಂಡು ಬಂದಿದೆ.

ಗೋಪಿ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಬಾಹುಲೇಯನ್ ನಾಪತ್ತೆಯಾಗಿದ್ದು, ಮೊಬೈಲ್ ಪೋನ್ ಸ್ವಿಚ್‌ಆಫ್ ಆಗಿದೆ. ಗೋಪಿ ಹಾಗೂ ಬಾಹುಲೇಯನ್ ವಾರದ ಹಿಂದೆ ಊರಿಗೆ ಹೋಗಿ ಕಳೆದ ಮಂಗಳವಾರ ವಾಪಾಸು ಕೆಲಸಕ್ಕೆ ಬಂದಿದ್ದರು. ಅ.18ರ ಸಂಜೆಯಿಂದ ಅ.19ರ ಬೆಳಗಿನ ಮಧ್ಯಾವಧಿಯಲ್ಲಿ ಗೋಪಿ ಮೃತಪಟ್ಟಿದ್ದಾರೆ. ಗೋಪಿ ಸಾವನ್ನಪ್ಪುತ್ತಿದ್ದಂತೆ ಜೊತೆಯಲ್ಲಿದ್ದ ಬಾಹುಲೇಯನ್ ನಾಪತ್ತೆಯಾಗಿರುವುದರಿಂದ ಗೋಪಿ ಸಾವಿನಲ್ಲಿ ಬಾಹುಲೇಯನ್ ಕೈವಾಡವಿರಬಹುದು ಎಂದು ಪ್ಲಾಂಟೇಶನ್‌ನ ಉಸ್ತುವಾರಿ ದಿಲೀಪ್ ಜಿ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!