Tuesday, June 9, 2026
Homeಕರಾವಳಿಮಂಗಳೂರು : ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದು ಬಟ್ಟೆ ಎಗರಿಸಿದ ಬುರ್ಖಾಧಾರಿ ಮಹಿಳೆ

ಮಂಗಳೂರು : ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದು ಬಟ್ಟೆ ಎಗರಿಸಿದ ಬುರ್ಖಾಧಾರಿ ಮಹಿಳೆ

- Advertisement -
- Advertisement -

ಮಂಗಳೂರು : ಬುರ್ಖಾಧಾರಿ ಮಹಿಳೆಯೊಬ್ಬರು ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದು ಅಂಗಡಿಯಲ್ಲಿದ್ದ ಬಟ್ಟೆಗಳನ್ನು ಎಗರಿಸಿ ಪರಾರಿಯಾದ ಘಟನೆ ಕಾವೂರಿನ ದುರ್ಗಾ ಪ್ರಸಾದ್ ಕಟ್ಟಡದಲ್ಲಿರುವ ಸಂಧ್ಯಾ ಟೆಕ್ಸ್ ಟೈಲ್ ನಲ್ಲಿ ನಡೆದಿದೆ.ಘಟನೆ ಸಪ್ಟೆಂಬರ್ ತಿಂಗಳಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆ ಬಟ್ಟೆ ಎಗರಿಸುವ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೃಶ್ಯದಲ್ಲಿ ಕಾಣುವಂತೆ ಬಟ್ಟೆ ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿಕೊಂಡು ಬಂದ ಮಹಿಳೆ ಅಂಗಡಿಯಲ್ಲಿದ್ದ ಬಟ್ಟೆಗಳನ್ನು ನೋಡುತ್ತಾರೆ. ಬಳಿಕ ಅಂಗಡಿಯಲ್ಲಿದ್ದ ಸಿಬ್ಬಂದಿ ಇನ್ನೋರ್ವ ಗ್ರಾಹಕರ ಬಳಿಗೆ ಹೋದ ವೇಳೆ ಬುರ್ಖಾಧಾರಿ ಮಹಿಳೆ ಅಂಗಡಿಯಲ್ಲಿದ್ದ ಕೆಲವೊಂದು ಬಟ್ಟೆಗಳನ್ನು ತಾನು ಧರಿಸಿದ ಬಟ್ಟೆಯ ಒಳಗೆ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗುತ್ತಾರೆ. ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕ ಬಟ್ಟೆ ಕಳವಾದ ಕುರಿತು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತ್ತೆಗೆ ಬಲೆ ಬಿಸಿದ್ದಾರೆ.

- Advertisement -

Latest News

error: Content is protected !!