Thursday, June 4, 2026
Homeಚಿಕ್ಕಮಗಳೂರುಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

- Advertisement -
- Advertisement -

ಚಿಕ್ಕಮಗಳೂರು: 9ನೇ ತರಗತಿ ವಿಧ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ನಿಧನವಾದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಮೂಡಿಗೆರೆ ಪಟ್ಟಣದಲ್ಲಿ ವಾಸವಿರುವ ಸಂತೋಷ್ ಎಂಬವರ ಪುತ್ರಿ ವೈಷ್ಣವಿ(14) ಮೃತ ದುರ್ದೈವಿ.


ಮೂಡಿಗೆರೆಯ ಬೆಥನಿ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ವೈಷ್ಣವಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹೆತ್ತವರು ಆಕೆಯ ನೇತ್ರ ದಾನ ಮಾಡಲು ನಿರ್ಧರಿಸಿದ್ದು, ಅದರಂತೆ ಆಸ್ಪತ್ರೆ ವೈದ್ಯರು ನೇತ್ರದಾನ ಪ್ರಕ್ರಿಯೆ ನೆರವೇರಿಸಿದರು.

ಮೃತಪಟ್ಟ ತಕ್ಷಣ ಕಣ್ಣು ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಮೃತ ಬಾಲಕಿ ಕಣ್ಣು ದಾನ ಮಾಡಲು ಮುಂದಾದ್ರೂ ಕೂಡ ಪಡೆಯಲು ಆಸ್ಪತ್ರೆಯವರು ಬಂದಿರಲಿಲ್ಲ. ತಡರಾತ್ರಿಯಾದ್ರೂ ಕಣ್ಣು ದಾನ ಪಡೆಯಲು ಬಾರದ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

- Advertisement -

Latest News

error: Content is protected !!