Thursday, June 4, 2026
Homeತಾಜಾ ಸುದ್ದಿಕೊಡಗಿನಲ್ಲಿ ಮನೆಗೆ ಬೆಂಕಿ ಇಟ್ಟ ಪ್ರಕರಣ: 7 ಜನರ ಸಾವಿಗೆ ಕಾರಣವಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಕೊಡಗಿನಲ್ಲಿ ಮನೆಗೆ ಬೆಂಕಿ ಇಟ್ಟ ಪ್ರಕರಣ: 7 ಜನರ ಸಾವಿಗೆ ಕಾರಣವಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

- Advertisement -
- Advertisement -

ಕೊಡಗು: ಮನೆಗೆ ಬೆಂಕಿಯಿಟ್ಟು  ಜನರನ್ನು ಸಜೀವ ದಹನ ಮಾಡಿ ಪರಾರಿಯಾಗಿದ್ದ ವ್ಯಕ್ತಿ ಶವ ಈಗ ತೋಟದಲ್ಲಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಭೋಜ ಎಂಬ ವ್ಯಕ್ತಿಯೊಬ್ಬ ಕುಡಿದು ಬಂದು ಮಂಜ ಎಂಬುವವರ ಮನೆ ಬಾಗಿಲು ಲಾಕ್ ಮಾಡಿ ಬೆಂಕಿ ಹಚ್ಚಿದ್ದ. ಮನೆಯಲ್ಲಿದ್ದ ಕುಟುಂಬ ಸದಸ್ಯರು ಹೊರಬರಲಾಗದೇ ಸಜೀವ ದಹನವಾಗಿದ್ದರು. ಘಟನೆಯಲ್ಲಿ 7 ಜನರು  ಸಾವನ್ನಪ್ಪಿದ್ದರು. ನಾಲ್ಕು ಮಕ್ಕಳು ಇಬ್ಬರು ಮಹಿಳೆಯರು ಸೇರಿ 7 ಜನರು ದಾರುಣವಾಗಿ ಮೃತಪಟ್ಟಿದ್ದರು.

ಘಟನೆ ಬಳಿಕ ಬೋಜ ಹಲವರಿಗೆ ಕರೆ ಮಾಡಿ ತಾನು ಮನೆಗೆ ಬೆಂಕಿ ಹಾಕಿದ್ದಾಗಿ ಹೇಳಿದ್ದ. ಅಂದಿನಿಂದ ನಾಪತ್ತೆಯಾಗಿದ್ದ ವ್ಯಕ್ತಿ ಈಗ ಕಾನೂರು ಗ್ರಾಮದ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬೋಜ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!