Thursday, June 4, 2026
Homeತಾಜಾ ಸುದ್ದಿಹೆತ್ತವರು‌ ಶಾಪಿಂಗ್ ಕರೆದುಕೊಂಡು‌ ಹೋಗಿಲ್ಲವೆಂದು 5ನೇ ತರಗತಿ‌ ಬಾಲಕಿ ಆತ್ಮಹತ್ಯೆ

ಹೆತ್ತವರು‌ ಶಾಪಿಂಗ್ ಕರೆದುಕೊಂಡು‌ ಹೋಗಿಲ್ಲವೆಂದು 5ನೇ ತರಗತಿ‌ ಬಾಲಕಿ ಆತ್ಮಹತ್ಯೆ

- Advertisement -
- Advertisement -

ಬೆಂಗಳೂರು; 5ನೇ ತರಗತಿ  ವಿದ್ಯಾರ್ಥಿನಿಯೊಬ್ಬಳು ಪೋಷಕರು ಶಾಪಿಂಗ್‌ಗೆ ಕರೆದೊಯ್ಯದ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ನಡೆದಿದೆ.

ಏರಿಯಾದಲ್ಲಿ ಹಬ್ಬದ ಹಿನ್ನೆಲೆ ಪೋಷಕರು ಎರಡು ದಿನಗಳ ಹಿಂದೆ ವೈಶಾಲಿಗೆ ಹೊಸ ಬಟ್ಟೆಯನ್ನು ಕೊಡಿಸಿದ್ದಾರೆ. ಆದರೆ ಮನೆಯಲ್ಲಿ ಉಳಿದವರಿಗೆ ಇನ್ನೂ ಬಟ್ಟೆ ಕೊಡಿಸುವುದು ಬಾಕಿ ಇತ್ತು. ಆದ್ದರಿಂದ ವೈಶಾಲಿಯನ್ನ ಮನೆಯಲ್ಲೇ ಬಿಟ್ಟು ಪೋಷಕರು ಶಾಪಿಂಗ್ ಹೊರಡಲು ಸಿದ್ಧರಾಗಿದ್ದಾರೆ. ತಾನು ಬರುವುದಾಗಿ ವೈಶಾಲಿ ಹಠ ಹಿಡಿದಿದ್ದಾಳೆ. ಆದರೂ ಆಕೆಯನ್ನ ಬಿಟ್ಟು ಉಳಿದ ಮಕ್ಕಳೊಂದಿಗೆ ಶಾಪಿಂಗ್ ಹೋಗಿದ್ದಾರೆ.

ಇದರಿಂದ ಮನನೊಂದ ವೈಶಾಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪೋಷಕರು ನೀಡಿದ ದೂರಿನನ್ವಯ ಚಾಮರಾಜಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!