ವಯಾನಾಡ್: ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ, ಹಲವು ರಾಜ್ಯಗಳು, ಜಿಲ್ಲೆಗಳು ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಅದೇ ರೀತಿ ಕೇರಳದ ರಾಜ್ಯದ ವಯನಾಡಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸದಿದ್ದವರಿಗೆ 5,000 ರೂ. ದಂಡ ವಿಧಿಸಲಾಗಿದೆ.
‘ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿ ವಿರುದ್ಧ ಕೇರಳ ಪೊಲೀಸ್ ಆಕ್ಟ್(ಕೆಪಿಎ) 118ಇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಜತೆಗೆ, 5,000 ದಂಡ ಪಾವತಿಸಬೇಕಾಗುತ್ತದೆ. ಇನ್ನು ಆತ ಕಾನೂನು ಹೋರಾಟ ನಡೆಸಿ, ನಂತರ ನ್ಯಾಯಾಲಯದಲ್ಲಿ ಆ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾದರೆ, 3 ವರ್ಷಗಳ ಕಾಲ ಜೈಲು ಶಿಕ್ಷೆ ಅಥವಾ 10,000 ದಂಡ ಅಥವಾ ಎರಡೂ ಶಿಕ್ಷೆ ನೀಡಬಹುದಾಗಿದೆ’ ಎಂದು ವಯಾನಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಾಂಗೊ ತಿಳಿಸಿದ್ದಾರೆ.
ಇನ್ನು ಕೆಲಸದ ಅಂಗಡಿಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಹಾಗೂ ಅಂಗಡಿಯಲ್ಲಿ ಕಾರ್ಯನಿರ್ವಹಿಸುವವರು ಫೇಸ್ ಮಾಸ್ಕ್ ಧರಿಸದಿದ್ದಲ್ಲಿ ಅಂತಹ ಅಂಗಡಿಗೆ 1,000 ರೂ ದಂಡ ವಿಧಿಸಲಾಗುತ್ತದೆ,’ ಎಂದು ಅವರು ತಿಳಿಸಿದ್ದಾರೆ.