Wednesday, May 15, 2024
Homeಕರಾವಳಿಉಡುಪಿಮೂಡುಬಿದಿರೆ: ಲಾರಿಯಲ್ಲಿ 5 ಕೋಟಿ ಮೌಲ್ಯದ ರಕ್ತ ಚಂದನ ಸಾಗಾಟ: ರಕ್ತ ಚಂದನ ಸಮೇತ 7...

ಮೂಡುಬಿದಿರೆ: ಲಾರಿಯಲ್ಲಿ 5 ಕೋಟಿ ಮೌಲ್ಯದ ರಕ್ತ ಚಂದನ ಸಾಗಾಟ: ರಕ್ತ ಚಂದನ ಸಮೇತ 7 ಮಂದಿಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

spot_img
- Advertisement -
- Advertisement -

ಮೂಡುಬಿದಿರೆ: ಮಲೇಷಿಯಾ ಸಿಂಗಾಪುರಕ್ಕೆ ಸಾಗಾಟ ಮಾಡಲು ಮಂಗಳೂರಿನ ಏನ್. ಎಂ. ಪಿ ಟಿ ಮೂಲಕ ಕೊಂಡೊಯ್ಯಲು ಬೃಹತ್ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ರಕ್ತಚಂದನವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಬೃಹತ್ ಜಾಲವನ್ನು ಬೆನ್ನಟ್ಟಿದ ಅರಣ್ಯ ವಿಚಕ್ಷಣ ದಳ ಉಡುಪಿ ಮಂಗಳೂರು ವಿಭಾಗ ಮೂಲ್ಕಿಯ ಕಿಲ್ಪಾಡಿ ಕೆಂಚನಕೆರೆ ಎಂಬಲ್ಲಿ ರಕ್ತಚಂದನ ಸಹಿತ ವಾಹನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಆಂಧ್ರ ಪ್ರದೇಶದಿಂದ ಕಡಿದು ತರಲಾದ ರಕ್ತಚಂದನ 316ಕೊರಡು (8308.400 ಕೆಜಿ ) ಆಂಧ್ರ ಮೂಲದ ಈಚರ್ ವಾಹನ ಹಾಗೂ ತಮಿಳುನಾಡು ಮೂಲದ ಮಹಿಂದ್ರಾ ಕಾರು ವಶಕ್ಕೆ ಪಡೆಯಲಾಗಿದೆ. ಮಹಿಂದ್ರಾ ಕಾರು ರಕ್ತಚಂದನಕ್ಕೆ ಬೆಂಗಾವಲಾಗಿತ್ತು. 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬೃಹತ್ ಜಾಲ ಬೇಧಿಸುವಲ್ಲಿ ಅರಣ್ಯ ಇಲಾಖೆ ಮಂಗಳೂರು ಕುಂದಾಪುರ ಪ್ರಾದೇಶಿಕ ವಿಭಾಗದ ಸಿಬ್ಬಂದಿಗಳ ಸಹಕಾರವನ್ನು ಸ್ಮರಿಸಲಾಗಿದೆ. ಕಾರ್ಯಾಚರಣೆ ನಡೆದ ಸ್ಥಳ ಮೂಡುಬಿದಿರೆ ವಲಯ ಅರಣ್ಯ ಇಲಾಖೆ ವ್ಯಾಪ್ತಿಯಾಗಿರುವುದರಿಂದ ಆರೋಪಿ ಸಹಿತ ಸೊತ್ತುಗಳನ್ನು ಮೂಡುಬಿದಿರೆಗೆ ಕರೆತರಲಾಗಿದೆ. ಕಾರ್ಯಾಚರಣೆ ನೇತೃತ್ವವನ್ನು ವಿಚಕ್ಷಣಾ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ವಹಿಸಿದ್ದರು.

ತಮಿಳುನಾಡು ಮೂಲದ ಮಹಿಂದ್ರಾ ಕಾರು ವಶಕ್ಕೆ ಪಡೆಯಲಾಗಿದೆ. ಮಹಿಂದ್ರಾ ಕಾರು ರಕ್ತಚಂದನಕ್ಕೆ ಬೆಂಗಾವಲಾಗಿತ್ತು. 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬೃಹತ್ ಜಾಲ ಬೇಧಿಸುವಲ್ಲಿ ಅರಣ್ಯ ಮಂಗಳೂರು ಕುಂದಾಪುರ ಪ್ರಾದೇಶಿಕ ವಿಭಾಗದ ಸಿಬ್ಬಂದಿಗಳ ಸಹಕಾರವನ್ನು ಸ್ಮರಿಸಲಾಗಿದೆ. ಕಾರ್ಯಾಚರಣೆ ನಡೆದ ಸ್ಥಳ ಮೂಡುಬಿದಿರೆ ವಲಯ ಅರಣ್ಯ ಇಲಾಖೆ ವ್ಯಾಪ್ತಿಯಾಗಿರುವುದರಿಂದ ಆರೋಪಿ ಸಹಿತ ಸೊತ್ತುಗಳನ್ನು ಮೂಡುಬಿದಿರೆಗೆ ಕರೆತರಲಾಗಿದೆ. ಕಾರ್ಯಾಚರಣೆ ನೇತೃತ್ವವನ್ನು ವಿಚಕ್ಷಣಾ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ವಹಿಸಿದ್ದರು.

- Advertisement -
spot_img

Latest News

error: Content is protected !!