Sunday, May 19, 2024
Homeತಾಜಾ ಸುದ್ದಿಇಸ್ಲಾಮಿಕ್ ಸಂಘಟನೆ ಪಿಎಫ್‌ಐನ 33 ಬ್ಯಾಂಕ್‌ ಖಾತೆಗಳು ಸ್ಥಗಿತ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಕ್ರಮ...

ಇಸ್ಲಾಮಿಕ್ ಸಂಘಟನೆ ಪಿಎಫ್‌ಐನ 33 ಬ್ಯಾಂಕ್‌ ಖಾತೆಗಳು ಸ್ಥಗಿತ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಕ್ರಮ ಕೈಗೊಂಡ ಇಡಿ

spot_img
- Advertisement -
- Advertisement -

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇಸ್ಲಾಮಿಕ್ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅಂಗಸಂಸ್ಥೆ ರಿಹಬ್ ಇಂಡಿಯಾ ಫೌಂಡೇಶನ್‌ಗೆ ಸಂಬಂಧಿಸಿದ ಕನಿಷ್ಠ 33 ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಫ್ರೀಜ್‌ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯವು ಫ್ರೀಜ್‌ ಮಾಡಿರುವ ಖಾತೆಗಳಲ್ಲಿ 68 ಲಕ್ಷಕ್ಕೂ ಹೆಚ್ಚು ಹಣ ಜಮೆಯಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ -2002ರ ಅಡಿಯಲ್ಲಿ (ಪಿಎಂಎಲ್‌ಎ) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಎಫ್‌ಐ ಗೆ ಸಬಂಧಿಸಿದ 23 ಖಾತೆಗಳಲ್ಲಿ 59,12,051 ರೂ. ಮತ್ತು ರಿಹಬ್ ಇಂಡಿಯಾ ಫೌಂಡೇಶನ್‌ಗೆ 10 ಖಾತೆಗಳಲ್ಲಿ 9,50,030 ರೂ. ಹಣವನ್ನು ಫ್ರೀಜ್‌ ಮಾಡಲಾಗಿದೆ. ಇಸ್ಲಾಮಿಕ್ ಸಂಘಟನೆಯು 2006ರಲ್ಲಿ ಕೇರಳದಲ್ಲಿ ರೂಪುಗೊಂಡಿತು ಮತ್ತು ದಿಲ್ಲಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ರಿಹಬ್ ಇಂಡಿಯಾ ಫೌಂಡೇಶನ್‌ನ ಬ್ಯಾಂಕ್ ಖಾತೆಗಳನ್ನು ಫ್ರೀಜ್‌ ಮಾಡಲಾಗಿದೆ ಎಂದು ಇಡಿ ಟ್ವೀಟ್‌ನಲ್ಲಿ ತಿಳಿಸಿದೆ. ರಾಜ್ಯ ಪೊಲೀಸ್‌ ಮತ್ತು ಎನ್‌ಐಎ ದಾಖಲಿಸಿದ ಪ್ರಕರಣಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪಿಎಫ್‌ಐ ವಿರುದ್ಧ ಪ್ರಕರಣ ದಾಖಲಿಸಿತ್ತು. ಆ ಪ್ರಕರಣಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಇಡಿ, ಮುನ್ನಾರ್ ವ್ಯಾಲಿ ಪ್ರಾಜೆಕ್ಟ್ ಮತ್ತು ಮಧ್ಯಪ್ರಾಚ್ಯದಲ್ಲಿರುವ ಬಾರ್ ಸೇರಿದಂತೆ ಹಲವಾರು ಯೋಜನೆಗಳಿಗೆ ಹಣಕಾಸು ಒದಗಿಸಲು ಸಂಸ್ಥೆಯ ವಿವಿಧ ಸದಸ್ಯರು ಅಪರಾಧದ ಆದಾಯವನ್ನು ಬಳಸಿದ್ದಾರೆ ಎಂಬುದನ್ನು ಪತ್ತೆಹಚ್ಚಿದೆ.

ಈ ಬ್ಯಾಂಕ್ ಖಾತೆಗಳು ಅಪರಾಧದ ಆದಾಯವನ್ನು ಒಳಗೊಂಡಿರುವುದರಿಂದ, ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರೀಯ ಸಂಸ್ಥೆ ಹೇಳಿದೆ. ಈ ಹಿಂದೆ, ಇಡಿ ಕೆಲವು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿತ್ತು ಮತ್ತು ಪ್ರಕರಣಕ್ಕೆ ಸಂಬಂಧಿಸಿದಮತೆ ಕೆಲವು ಆಸ್ತಿಗಳನ್ನು ಜಪ್ತಿ ಮಾಡಿತ್ತು. ಜಾರಿ ನಿರ್ದೇಶನಾಲಯವು (ಇಡಿ) 2018ರಲ್ಲಿ ಪ್ರಕರಣ ದಾಖಲಿಸಿತ್ತು. 2020 ರಲ್ಲಿ, ಸಂಸ್ಥೆಯು ಒಂಬತ್ತು ರಾಜ್ಯಗಳಲ್ಲಿ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತು, ಅವುಗಳು PFIಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ.

ಅದೇ ವರ್ಷ (2020), ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರವು PFI ಅನ್ನು ನಿಷೇಧಿಸುವಂತೆ ಕರೆ ನೀಡಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಗಳಿಗೆ ‘ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದೊಂದಿಗೆ ಸೇರಿ ಸಂಘಟನೆಯು ಪ್ಲಾನ್‌ ಮಾಡಿರುವುದಲ್ಲಿದೆ ಹಣಕಾಸು ನೆರವು ಒದಗಿಸಿದೆ ಎಂದು ಬಿಜೆಪಿ ಸರ್ಕಾರ ಆರೋಪಿಸಿದೆ.

‘ಪಿಎಫ್‌ಐ ಹಿರಿಯ ಅಧಿಕಾರಿಗಳಿಂದ ವಶಪಡಿಸಿಕೊಂಡ ನಂಬಲರ್ಹ ಪುರಾವೆಗಳ ಆಧಾರದ ಮೇಲೆ’ ಪಿಎಫ್‌ಐ ಮತ್ತು ಭೀಮ್ ಆರ್ಮಿ ನಡುವಿನ ಹಣಕಾಸಿನ ಸಂಬಂಧಗಳನ್ನು ತನಿಖೆ ನಡೆಸುತ್ತಿದೆ ಎಂದು ಸಂಸ್ಥೆ ನಂತರ ಟ್ವೀಟ್‌ನಲ್ಲಿ ತಿಳಿಸಿದೆ.

- Advertisement -
spot_img

Latest News

error: Content is protected !!