Thursday, June 4, 2026
Homeಕರಾವಳಿಸುಳ್ಯ; ಅಜ್ಜನ ಮನೆಗೆ ಬಂದಿದ್ದ 4ನೇ ಕ್ಲಾಸ್ ಬಾಲಕ ನಾಪತ್ತೆ

ಸುಳ್ಯ; ಅಜ್ಜನ ಮನೆಗೆ ಬಂದಿದ್ದ 4ನೇ ಕ್ಲಾಸ್ ಬಾಲಕ ನಾಪತ್ತೆ

- Advertisement -
- Advertisement -

ಸುಳ್ಯ; ಅಜ್ಜನ ಮನೆಗೆ ಬಂದಿದ್ದ 4ನೇ ಕ್ಲಾಸ್ ಬಾಲಕ ನಾಪತ್ತೆಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಇಸ್ಮಾಯಿಲ್ ಮಾಡ್ನೂರು ಅವರ ಪುತ್ರ ನಾಲ್ಕನೇ ತರಗತಿ ಬಾಲಕ ಅಹಮ್ಮದ್ ಶಾಜಿದ್ ಫೆಬ್ರವರಿ 2ರಂದು ಶಾಲೆಗೆ ರಜೆ ಇದ್ದುದರಿಂದ ಅಪ್ರಾಪ್ತ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿರುವ ಅಜ್ಜನ ಮನೆಗೆ ಬಂದಿದ್ದ. ಫೆಬ್ರವರಿ 3ರಂದು ಸಂಜೆ 5 ಗಂಟೆಗೆ ಬಾಲಕ ಸುಳ್ಯದ ಕಂಪ್ಯೂಟರ್ ಅಂಗಡಿಗೆ ಹೋಗಿ ನಂತರ ಮಾಡ್ನೂರಿಗೆ ತೆರಳುವುದಾಗಿ ಫೋನ್ ನಲ್ಲಿ ತನ್ನ ಮನೆಗೆ ತಿಳಿಸಿ ಅಜ್ಜನ ಮನೆಯಿಂದ ತೆರಳಿದ್ದಾನೆ.

ಹಾಗೆ ಹೋದ ಬಾಲಕ ಅಹಮ್ಮದ್ ಶಾಜಿದ್ ರಾತ್ರಿಯಾದರೂ ತನ್ನ ಮನೆಗೆ ಬಾರದೆ ಇದ್ದುದರಿಂದ ಮನೆಯವರು ಆತಂಕಕ್ಕೀಡಾಗಿದ್ದಾರೆ. ಸಮೀಪದ ಬಂಧುಗಳ ಮನೆಗೆ ಹೋಗಿರಬಹುದು ಎಂದು ಎಲ್ಲ ಕಡೆ ವಿಚಾರಿಸಿದ್ದಾರೆ. ಆದರೆ ಎಲ್ಲೂ ಆತ ಪತ್ತೆಯಾಗದ ಹಿನ್ನೆಲೆಯಲ್ಲಿ ಶಾಜಿದ್ ತಂದೆ ಸುಳ್ಯ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಇದೀಗ ಪೊಲೀಸರು ಅ.ಕ್ರ: 18/2024 ಕಲಂ 363 ಐಪಿಸಿ ಪ್ರಕಾರ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!