Thursday, June 25, 2026
Homeಇತರಖಾಸಗಿ ವಾಹಿನಿಯ ಕ್ಯಾಮೆರಾಮ್ಯಾನ್ ಕೊರೊನಾಗೆ ಬಲಿ!

ಖಾಸಗಿ ವಾಹಿನಿಯ ಕ್ಯಾಮೆರಾಮ್ಯಾನ್ ಕೊರೊನಾಗೆ ಬಲಿ!

- Advertisement -
- Advertisement -

ಚೆನ್ನೈ : ತಮಿಳು ಖಾಸಗಿ ವಾಹಿನಿಯ 41 ವರ್ಷದ ಕ್ಯಾಮೆರಾಮ್ಯಾನ್ ಮಹಾಮಾರಿಗೆ ಬಲಿಯಾಗಿದ್ದಾರೆ.
ಪೆರಿಯಾರ್ ನಗರ ನಿವಾಸಿಯಾಗಿರುವ ಇ ವೆಲುಮುರಗನ್ ಅವರಿಗೆ ಎರಡು ವಾರಗಳ ಹಿಂದೆ ಸೋಂಕು ಆವರಿಸಿತ್ತು. ಅಂದಿನಿಂದ ರಾಜೀವ್ ಗಾಂಧಿ ಸರ್ಕಾರ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಲುಮುರಗನ್ ಅವರು ಇಂದು ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ವೆಲುಮುರಗನ್ ಅವರ ಸಾವಿಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜಿ ಪ್ರಕಾಶ್ ಅವರು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!