Thursday, April 25, 2024
Homeಕರಾವಳಿಕಾಸರಗೋಡುಕೇರಳದಲ್ಲಿ 17ರ ಬಾಲೆ ಮೇಲೆ 38 ಮಂದಿಯಿಂದ ನಿರಂತರ ಅತ್ಯಾಚಾರ: 20 ಮಂದಿಯನ್ನು ಬಂಧಿಸಿದ ಪೊಲೀಸರು

ಕೇರಳದಲ್ಲಿ 17ರ ಬಾಲೆ ಮೇಲೆ 38 ಮಂದಿಯಿಂದ ನಿರಂತರ ಅತ್ಯಾಚಾರ: 20 ಮಂದಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಕೇರಳ:  ಇಲ್ಲಿನ ಮಲಪ್ಪುರಂನಲ್ಲಿ ಅತ್ಯಂತ ಅಮಾನುಷ ಕೃತ್ಯವೊಂದು ಬಯಲಾಗಿದೆ. ಅಪ್ರಾಪ್ತ ಯುವತಿಯನ್ನು 38 ಮಂದಿ ಅತ್ಯಾಚಾರ ಮಾಡಿ ಲೈಂಗಿಕ ಶೋಷಣೆ ಮಾಡಿರುವ ಪ್ರಕರಣ ಆಪ್ತ ಸಮಾಲೋಚನೆ ವೇಳೆ ತಡವಾಗಿ ಬೆಳಕಿಗೆ ಬಂದಿದೆ.

ಕೇರಳದ ಮಲಪ್ಪುರಂನ ನಿರ್ಭಯಾ ಕೇಂದ್ರದಲ್ಲಿ ನಡೆದ ಆಪ್ತ ಸಮಾಲೋಚನೆ ವೇಳೆ 17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿ ತಮ್ಮ ಕಾಮತೃಷೆಗೆ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಅತ್ಯಾಚಾರ ಸಂತ್ರಸ್ತೆಯೇ ಬೆಚ್ಚಿಬೀಳುವ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾಳೆ. ಕಳೆದ ಕೆಲ ತಿಂಗಳಲ್ಲಿ ತನ್ನ  ಮೇಲೆ 38 ಮಂದಿ ಪುರಷರು ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ಸಂತ್ರಸ್ಥೆ ಹೇಳಿಕೊಂಡಿರುವಂತೆ 2016 ರಲ್ಲಿ, ಅಂದರೆ ತನಗೆ 13 ವರ್ಷವಾಗಿದ್ದಾಗ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ ನಡೆದಿತ್ತು. ನಂತರ, ಒಂದೇ ವರ್ಷದಲ್ಲಿ ಮತ್ತೊಮ್ಮೆ ಇಂತಹ ಕೃತ್ಯ ಮರುಕಳಿಸಿದೆ. ಎರಡನೇ ಘಟನೆ ನಂತರ ಸಂತ್ರಸ್ತೆಯನ್ನು ಬಾಲಗೃಹಕ್ಕೆ ರವಾನಿಸಲಾಗಿತ್ತು. ನಂತರ, ಕಳೆದ ವರ್ಷ ತಾಯಿ ಮತ್ತು ಸಹೋದರನೊಂದಿಗೆ ಕಳುಹಿಸಿಕೊಡಲಾಗಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಹನೀಫಾ ಅವರು, ಸಂತ್ರಸ್ತೆ ವರ್ಷದ ಹಿಂದೆ ಬಾಲಗೃಹದಿಂದ ಬಿಡಗಡೆಯಾದ ನಂತರ ಕೆಲ ಕಾಲ ಕಾಣೆಯಾಗಿದ್ದರುಳು. ನಂತರ, ಡಿಸೆಂಬರ್‌ನಲ್ಲಿ ಪಾಲಕ್ಕಾಡ್‌ನಲ್ಲಿ ಪತ್ತೆಯಾಗಿದ್ದಳು. ಅಲ್ಲಿಂದ ನಿರ್ಭಯ ಕೇಂದ್ರಕ್ಕೆ ತರಲಾಗಿತ್ತು ಎಂದು ಹೇಳಿದ್ದಾರೆ.ಇನ್ನು ಸಂತ್ರಸ್ಥೆ ಕಾಣೆಯಾಗಿದ್ದಾಗ ತಾವು ಅನುಭವಿಸಿರುವ ಲೈಂಗಿಕ ಕಿರುಕುಳ, ಶೋಷಣೆಯ ಸರಣಿಯನ್ನು ನಿರ್ಭಯಾ ಕೇಂದ್ರದ ಅಧಿಕಾರಿಗಳ ಎದುರು ಸಂತ್ರಸ್ತೆ ವಿವರಿಸಿದ್ದಾಳೆ.

ಇನ್ನು ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯಡಿಯಲ್ಲಿ ಪೊಲೀಸರು ಒಟ್ಟು 44 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಪೈಕಿ 20 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸರು, ಬಹುತೇಕ ಎಲ್ಲ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಬಂಧಿತರು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!