Friday, June 5, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು ಬರೋಬ್ಬರಿ 3693 ಕೋವಿಡ್ ಪ್ರಕರಣ, 115 ಜನ ಕೊರೊನಾಗೆ ಬಲಿ, ಸಿಲಿಕಾನ್ ಸಿಟಿಯಲ್ಲಿ 2,208...

ರಾಜ್ಯದಲ್ಲಿಂದು ಬರೋಬ್ಬರಿ 3693 ಕೋವಿಡ್ ಪ್ರಕರಣ, 115 ಜನ ಕೊರೊನಾಗೆ ಬಲಿ, ಸಿಲಿಕಾನ್ ಸಿಟಿಯಲ್ಲಿ 2,208 ಮಂದಿಗೆ ಸೋಂಕು ದೃಢ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಸದ್ಯಕ್ಕಂತೂ ರಾಜ್ಯದಲ್ಲಿ ಕೊರೊನಾದ ಪ್ರತಾಪ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಇವತ್ತು ಕರ್ನಾಟಕದಲ್ಲಿ ಬರೋಬ್ಬರಿ 3693 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಸಾವಿನ ಸಂಖ್ಯೆ ಶತಕ ದಾಟಿದೆ. ಬರೋಬ್ಬರಿ 115 ಮಂದಿಯನ್ನು ಇವತ್ತು ರಾಜ್ಯದಾದ್ಯಂತ ಕೊರೊನಾ ಬಲಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಸದ್ಯ 33,205 ಸಕ್ರೀಯ ಪ್ರಕರಣಗಳಿದ್ದು, ಇಂದು 1028 ರಾಜ್ಯದಾದ್ಯಂತ ಇರುವ ಆಸ್ಪತ್ರೆಗಳಿಂದ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿ 2,208 ಮಂದಿಗೆ ಇಂದು ಒಂದೇ ದಿನದಲ್ಲಿ ಕೊರೊನಾ ಸೋಂಕು ತಗುಲಿರೋದು ದೃಢ ಪಟ್ಟಿದೆ. ಅಲ್ಲದೇ ಸಿಲಿಕಾನ್ ಸಿಟಿ ಒಂದರಲ್ಲೇ 75 ಮಂದಿ ಇವತ್ತು ಹೆಮ್ಮಾರಿಗೆ ಬಲಿಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 20,623 ಸಕ್ರೀಯ ಪ್ರಕರಣಗಳಿದ್ದು, 338 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

- Advertisement -

Latest News

error: Content is protected !!