Thursday, June 4, 2026
Homeಕರಾವಳಿಮಂಜೇಶ್ವರ ಗೋವಿಂದ ಪೈ ಸಂಶೋಧನಾ ಸಂಪುಟ ಪುನರ್ ಮುದ್ರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 30...

ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಸಂಪುಟ ಪುನರ್ ಮುದ್ರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 30 ಲಕ್ಷ ರೂ. ಅನುದಾನ

- Advertisement -
- Advertisement -

ಬೆಂಗಳೂರು : ಕನ್ನಡದ ಮೊದಲ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಸಂಪುಟ ಪುನರ್ ಮುದ್ರಣಕ್ಕಾಗಿ ೩೦ ಲಕ್ಷ ರೂ. ಧನ ಸಹಾಯ ಮಂಜೂರು ಮಾಡಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಹತ್ವದ ಆದೇಶ ಪ್ರಕಟಿಸಿದೆ.

ಗೋವಿಂದ ಪೈ ಗಳ ಸಂಶೋಧನಾ ಸಂಪುಟ ೧೯೯೫ ರಲ್ಲಿ ಪ್ರಕಟವಾಗಿತ್ತು. ಇದಾಗಿ ಇಪ್ಪತೈದು ವರ್ಷಗಳು ಕಳೆದಿವೆ. ಸದ್ಯಕ್ಕೆ ಆ ಸಂಪುಟದ ಯಾವುದೇ ಪ್ರತಿಗಳು ಲಭ್ಯವಿರಲಿಲ್ಲ.

ಈ ಹಿನ್ನೆಲೆಯಲ್ಲಿ ಉಡುಪಿಯ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಗಳು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪತ್ರ ಬರೆದು ಧನ ಸಹಾಯ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಸರಕಾರ ೩೦ ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

- Advertisement -

Latest News

error: Content is protected !!