Tuesday, May 14, 2024
Homeಕರಾವಳಿಉಡುಪಿಪ್ರತ್ಯೇಕ ಘಟನೆ: ಉಡುಪಿ ಜಿಲ್ಲೆಯಲ್ಲಿ ಇಂದು ಮೂವರು ಆತ್ಮಹತ್ಯೆ

ಪ್ರತ್ಯೇಕ ಘಟನೆ: ಉಡುಪಿ ಜಿಲ್ಲೆಯಲ್ಲಿ ಇಂದು ಮೂವರು ಆತ್ಮಹತ್ಯೆ

spot_img
- Advertisement -
- Advertisement -

ಕೊಲ್ಲೂರು, ಮೇ 8: ಕಳೆದೊಂದು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು ನಿವಾಸಿ ಅರುಣ್ ಬಳೆಗಾರ (42) ಎಂಬವರು ಕಾಯಿಲೆಯಿಂದ ಗುಣಮುಖವಾಗದ ಚಿಂತೆಯಿಂದ ಹಾಗೂ ವೈಯಕ್ತಿಕ ಕಾರಣಗಳಿಂದ ಮನನೊಂದು ಮನೆಯ ಕಡುಮಾಡಿಗೆ ಬೈರಸ್ ಕಟ್ಟಿ ಅದಕ್ಕೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯಡ್ಕ: ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ನಿರ್ಮಲ ಶೆಟ್ಟಿ (52) ಎಂಬವರು ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರೂ ಗುಣಮುಖವಾಗದ ವಿಚಾರದಲ್ಲಿ ಮನನೊಂದ ಮನೆಯ ಸಮೀಪದ ಹಾಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಕಳೆದ ಐದಾರು ವರ್ಷಗಳಿಂದ ಕಾಲುನೋವು ಹಾಗೂ ಬಿ.ಪಿ., ಶುಗರ್ ಕಾಯಿಲೆಗಳಿಂದ ಬಳಲುತಿದ್ದ ಮಣೂರು ಗ್ರಾಮ ದೇವಸದ ರಘುರಾಮ ಶೆಟ್ಟಿ (82) ಎಂಬವರು ನಿನ್ನೆ ರಾತ್ರಿ ಮನೆಯ ಸಮೀಪದ ಸಂಬಂಧಿ ರತ್ನಾವತಿ ಎಂಬವರ ಹೊಸ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!