Thursday, June 4, 2026
Homeಕರಾವಳಿಮೇ.9ರಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ

ಮೇ.9ರಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ

- Advertisement -
- Advertisement -

ಬೆಳ್ತಂಗಡಿ: ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನಿಂದ ಬೆಳ್ತಂಗಡಿಗೆ ಬಂದು ಈಗ ಪುನಃ ಮತ್ತೆ ಬೆಂಗಳೂರಿಗೆ ವಾಪಾಸು ತೆರಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಬೆಳ್ತಂಗಡಿಯ ನಾಗರಿಕರಿಗೆ ಮತ್ತು ಬೆಂಗಳೂರಿನಿಂದ ಬಂದು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ದಾಖಲೆಗಳ ಸಹಿತ ಮುಂಜಾಗ್ರತಾ ಕ್ರಮದೊಂದಿಗೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಅಂತರ್ ಜಿಲ್ಲಾ ಪ್ರಯಾಣ ಪಾಸ್ ಗಾಗಿ ಪ್ರಯಾಣಿಕರು ಸಾರಿಗೆ ಇಲಾಖೆಯ ವೆಬ್ಸೈಟ್ ಮೂಲಕ ನೋಂದಾವಣಿ ಮಾಡಿಕೊಳ್ಳಬೇಕು. ಈ ಕುರಿತು ಕೆಲದಿನಗಳ ಹಿಂದೆ ಶಾಸಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿನಂತಿಸಿದ್ದರು.

ಬಳಿಕ ಶ್ರಮಿಕ ಶಾಸಕರ ಕಚೇರಿಗೆ ಪಡೆದುಕೊಂಡ ಪಾಸಿನ ದಾಖಲೆಯನ್ನು ನೀಡಲು ಸೂಚಿಸಲಾಗಿತ್ತು. ನಾಳೆ (ಮೇ.9) ಬೆಳ್ತಂಗಡಿ ಬಸ್ಸು ನಿಲ್ದಾಣದಿಂದ ಬೆಂಗಳೂರು ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ(ಕೆಂಪೇಗೌಡ ಬಸ್ಸು ನಿಲ್ದಾಣ) ಶನಿವಾರ ರಾತ್ರಿ 9 ಗಂಟೆಗೆ ಬಸ್ ಗಳು ಹೊರಡಲಿದೆ.

- Advertisement -

Latest News

error: Content is protected !!