- Advertisement -
- Advertisement -
ಕಾಸರಗೋಡು: ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡು ಜಿಲ್ಲೆ ಕಾಜ್ಞಂಗಾಡಿನ ಕಲ್ಲುರಾವಿಯಲ್ಲಿ ನಡೆದಿದೆ.
ಮೃತರನ್ನು ನೂರುದ್ದೀನ್ ಅವರ ಮಗ ಬಶೀರ್ (4), ನಾಸಿರ್ ಅವರ ಪುತ್ರ ಅಜ್ನಾಸ್ (5) ಮತ್ತು ಸಮೀರ್ ಅವರ ಪುತ್ರ ನಿಷಾದ್ (6) ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಮಕ್ಕಳು ಆಟವಾಡಲು ಕೆರೆಗೆ ಇಳಿದಿದ್ದಾರೆ. ಮನೆ ಸಮೀಪ ಆಟವಾಡುತ್ತಿದ್ದ ಮಕ್ಕಳು ಕಾಣೆಯಾದಾಗ ಪೋಷಕರು ಮಕ್ಕಳ ಹುಡುಕಾಟ ನಡೆಸಿದ್ದು, ಈ ವೇಳೆ ಮನೆಯಿಂದ 200 ಮೀಟರ್ ದೂರದಲ್ಲಿರುವ ಕೆರೆಯಲ್ಲಿ ಮಕ್ಕಳ ಶವ ಪತ್ತೆಯಾಗಿದೆ.
ಸ್ಥಳೀಯರು ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಕ್ಕಳು ಅದಾಗಲೇ ಮೃತಪಟ್ಟರೆಂದು ವೈದ್ಯರು ತಿಳಿಸಿದ್ದಾರೆ.
- Advertisement -