Saturday, May 11, 2024
Homeಚಿಕ್ಕಮಗಳೂರುಆಶ್ರಯ ಯೋಜನೆಯಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ 3.50 ಲಕ್ಷ ಹಣ; 260 ಜನರಿಗೆ ಹಕ್ಕು...

ಆಶ್ರಯ ಯೋಜನೆಯಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ 3.50 ಲಕ್ಷ ಹಣ; 260 ಜನರಿಗೆ ಹಕ್ಕು ಪತ್ರ ವಿತರಣೆ

spot_img
- Advertisement -
- Advertisement -

ಶಿವಮೊಗ್ಗ: ಶಿವಮೊಗ್ಗ ನಗರದ ವಿದ್ಯಾನಗರದ ಕಲ್ಲರ್ಟಿ, ಜಟ್ ಪಟ್ ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇಂದು ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮ ನಡೆಯಿತು.

260 ಜನರಿಗೆ ಹಕ್ಕು ಪತ್ರಗಳನ್ನು ಶಿವಮೊಗ್ಗದ ಶಾಸಕರಾದ ಕೆ.ಎಸ್ ಈಶ್ವರಪ್ಪ ಅವರು ವಿತರಿಸಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಜನರಿಗೆ ಸರ್ಕಾರವು ಮನೆ ಕಟ್ಟಿಕೊಂಡು ಜೀವನ ನಡೆಸಲು ಪೂರಕವಾದ ಹಣದ ಸಹಾಯವನ್ನು ನೀಡುತ್ತದೆ ಎಂದರು.

ಇನ್ನೂ ಕೇಂದ್ರ ಸರಕಾರವು ಆಶ್ರಯ ಯೋಜನೆಯಡಿಯಲ್ಲಿ 3.50 ಲಕ್ಷ ಹಣವನ್ನು ಉಚಿತವಾಗಿ ನೀಡುತ್ತಿದ್ದು, ಒಂದು ಲಕ್ಷ ರೂಪಾಯಿವರೆಗಿನ ಹಣವನ್ನು ಬ್ಯಾಂಕ್ ಸಾಲದ ರೂಪದಲ್ಲಿ ನೀಡುತ್ತದೆ. ಈ ಯೋಜನೆಯನ್ನು ಅರ್ಹರು
ಬಳಸಿಕೊಳ್ಳಬೇಕೆಂದರು.

ಹಕ್ಕುಪತ್ರಗಳನ್ನು ಪಡೆದ ಫಲಾನುಭವಿಗಳು ಸಂತಸವನ್ನು ವ್ಯಕ್ತಪಡಿಸಿದ್ದು, ಹಕ್ಕುಪತ್ರಗಳ ವಿತರಣಾ ಸಂದರ್ಭದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರಾದ ಶಶಿಧರ್ ಸೇರಿದಂತೆ ಮೊದಲಾದ ಪದಾಧಿಕಾರಿಗಳು ಶಾಸಕರೊಂದಿಗಿದ್ದರು.

- Advertisement -
spot_img

Latest News

error: Content is protected !!