Wednesday, June 24, 2026
Homeಕರಾವಳಿಬೆಳ್ತಂಗಡಿಯಲ್ಲಿ ಇಂದು ಎರಡು ಕೋಟಿ ವೆಚ್ಚದ ಕೇಂದ್ರ ಗ್ರಂಥಾಲಯಕ್ಕೆ ಶಿಲಾನ್ಯಾಸ

ಬೆಳ್ತಂಗಡಿಯಲ್ಲಿ ಇಂದು ಎರಡು ಕೋಟಿ ವೆಚ್ಚದ ಕೇಂದ್ರ ಗ್ರಂಥಾಲಯಕ್ಕೆ ಶಿಲಾನ್ಯಾಸ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಜೂನಿಯರ್ ಕಾಲೇಜು ಸಮೀಪ ತಲೆ ಎತ್ತಲಿರುವ ಕೇಂದ್ರ ಗ್ರಂಥಾಲಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಇಂದು ಜೂ.18ರಂದು ಮಧ್ಯಾಹ್ನ ಗಂಟೆ 12ಕ್ಕೆ ನೆರವೇರಲಿದೆ.


ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ್ ಗೌಡ ಮತ್ತಿತರರು ಉಪಸ್ಥಿತರಿರುವರು.


ಬೆಳ್ತಂಗಡಿಯ ತಾಲೂಕು ಸಾರ್ವಜನಿಕ ಗ್ರಂಥಾಲಯ ಅಪಾಯಕಾರಿ ಹಂತಕ್ಕೆ ತಲುಪಿದ್ದು, ಅದಕ್ಕೆ ಪರ್ಯಾಯವಾಗಿ ರೂ.ಎರಡು ಕೋಟಿ ವೆಚ್ಚದಲ್ಲಿ ಸುಸಜ್ಜಿತ, ಎಲ್ಲಾ ವ್ಯವಸ್ಥೆಗಳ ಕೇಂದ್ರ ಗ್ರಂಥಾಲಯ ನಿರ್ಮಾಣವಾಗಲಿದೆ.

- Advertisement -

Latest News

error: Content is protected !!