Wednesday, June 24, 2026
HomeWorldಕಾಫಿ ಡೇ ಸಿದ್ದಾರ್ಥ – ಜೀವನ ಕಥೆ ಆಧಾರಿತ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ

ಕಾಫಿ ಡೇ ಸಿದ್ದಾರ್ಥ – ಜೀವನ ಕಥೆ ಆಧಾರಿತ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ

- Advertisement -
- Advertisement -

ಬೆಂಗಳೂರು: ಖ್ಯಾತ ಉದ್ಯಮಿ ಕೆಫೆ ಕಾಫಿ ಡೇ ಸ್ಥಾಪಕ ದಿವಂಗತ ವಿ.ಜಿ ಸಿದ್ದಾರ್ಥ ಅವರ ಜೀವ ಕಥೆಯನ್ನು ಆಧರಿಸಿ ಸಿನಿಮಾ ಮೂಡಿ ಬರಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.


ಟಿ- ಸೀರೀಸ್ ಹಾಗೂ ಆಲ್‌ಮೈಟಿಮೋಷನ್ ಪಿಕ್ಚರ್ ಜಂಟಿಯಾಗಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಕಾಫಿ ಡೇ ಮೂಲಕ ವಿಶ್ವಪ್ರಸಿದ್ಧಿ ಪಡೆದಿರುವ ಸಿದ್ದಾರ್ಥ ಅವರ ಜೀವನ ಚರಿತ್ರೆಯನ್ನು ಬೆಳ್ಳಿ ತೆರೆಯ ಮೇಲೆ ತೆರಲು ಉದ್ದೇಶಿದ್ದೇವೆ. ಇದು ಸಂತಸದ ವಿಚಾರ ಎಂದು ಟಿ ಸೀರೀಸ್ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ಹೇಳಿದ್ದಾರೆ.

ಕಾಫಿ ಕಿಂಗ್ ಕೆಫೆ ಕಾಫಿ ಡೇ ವಿ.ಜಿ. ಸಿದ್ದಾರ್ಥ್ ಹಠಾತ್ ಪ್ರಸಿದ್ಧಿ ಹಾಗೂ ಹಠಾತ್ ಸಾವು ಎನ್ನುವ ಪುಸ್ತಕದ ಹಕ್ಕನ್ನು ಪಡೆದುಕೊಂಡಿರುವುದಾಗಿ ಹೇಳಿದೆ.

- Advertisement -

Latest News

error: Content is protected !!