Wednesday, May 8, 2024
Homeಅಪರಾಧ29 ವರ್ಷಗಳ ಹಿಂದೆ ನಡೆದ ಆ್ಯಸಿಡ್ ದಾಳಿ ಪ್ರಕರಣ; ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

29 ವರ್ಷಗಳ ಹಿಂದೆ ನಡೆದ ಆ್ಯಸಿಡ್ ದಾಳಿ ಪ್ರಕರಣ; ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆಯಲ್ಲಿ 27 ಸಪ್ಟೆಂಬರ್ 1995ರಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿ ಎಂದು ನ್ಯಾಯಾಲಯ ಆದೇಶಿಸಿದೆ.

ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣೆ ಪ್ರಕಾರ, ಉಜಿರೆ ಗ್ರಾಮದ ನಿವಾಸಿ ಮಂಜುನಾಥ್ ಪ್ರಭು ಅವರ ಮಗ ಗಣೇಶ್ ಪ್ರಭು ಎಂಬುವವರ ಮಾಲಿಕತ್ವಕ್ಕೆ ಸೇರಿದ ಬಾಡಿಗೆ ಮನೆಯೊಂದರಲ್ಲಿ ಪ್ರಕರಣ ಆರೋಪಿ ಶಂಕರ ಗೌಡ ಯಾನೇ ವೀರಪ್ಪ ಗೌಡ ಬಾಡಿಗೆ ನೆಲೆಯಲ್ಲಿ ವಾಸ್ತವ್ಯ ಹೊಂದಿದ್ದು, ಆರೋಪಿಯ ಪತ್ನಿ ಗಣೇಶ್ ಪ್ರಭುವಿನ ಮನೆಯಲ್ಲಿ ಮನೆಗೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ನಂತರ ಆಕೆಯನ್ನು ಮನೆಕೆಲಸದಿಂದ ತೆಗೆದುಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಕೆಲಸದಿಂದ ಕಿತ್ತುಹಾಕಿದ ಪೂರ್ವದ್ವೇಷದ ಕಾರಣಕ್ಕಾಗಿ ಆರೋಪಿಯು 27 ಸಪ್ಟೆಂಬರ್ 1995 ರಂದು ಈ ಕೃತ್ಯ ಎಸಗಿದ್ದ ಎಂದು ಹೇಳಿದ್ದಾರೆ.

ಇನ್ನು ಈ ಸಂಬಂಧ ಶಂಕರ ಗೌಡ ಯಾನೇ ಶ್ರೀಧರ ಗೌಡ ಎಂಬವರನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇನ್ನು ಈ ಪ್ರಕರಣದ ಕುರಿತು ದೀರ್ಘಕಾಲದ ಸಾಕ್ಷ್ಯ ವಿಚಾರಣೆಯು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದಿದ್ದು, ಇದೀಗ ಆರೋಪಿ ಶಂಕರಗೌಡ ಯಾನೆ ಶ್ರೀಧರ ಗೌಡ ದೋಷಮುಕ್ತನಾಗಿದ್ದಾನೆ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

- Advertisement -
spot_img

Latest News

error: Content is protected !!