Wednesday, July 15, 2026
Homeಕರಾವಳಿಪುತ್ತೂರಿನಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಾರಂಭಿಸುವ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನೆ; ಎಸ್ಪಿ...

ಪುತ್ತೂರಿನಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಾರಂಭಿಸುವ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನೆ; ಎಸ್ಪಿ ಕಚೇರಿ ಸ್ಥಳಾಂತರಿಸುವ ಅಗತ್ಯತೆ ಇಲ್ಲ ಎಂದ ಗೃಹ ಸಚಿವ ಡಾ. ಜಿ. ಪರಮೇಶ್ವರ್

- Advertisement -
- Advertisement -

ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಶಾಸಕ  ಅಶೋಕ್ ಕುಮಾರ್ ರೈ ಪ್ರಶ್ನೋತ್ತರ ಕಲಾಪದಲ್ಲಿ ಆಗ್ರಹಿಸಿದರು.

ಈ ವೇಳೆ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಎಲ್ಲಾ ಜಿಲ್ಲಾ ಕಚೇರಿಗಳು ಮಂಗಳೂರಿನಲ್ಲಿ ಇರುವ ಕಾರಣ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಸಾಧ್ಯವಿಲ್ಲ.ಪುತ್ತೂರಿನಲ್ಲಿ ಈಗಾಗಲೇ ಎಎಸ್ಪಿ ಕಚೇರಿ ಇದೆ, ಎಸ್ಪಿ ಕಚೇರಿ ಸ್ಥಳಾಂತರಿಸುವ ಅಗತ್ಯತೆ ಇಲ್ಲ  ಎನ್ನುವ  ಮೂಲಕ ಪುತ್ತೂರಿನಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ ಆರಂಭಿಸಲು ಸಾಧ್ಯವಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.

- Advertisement -

Latest News

error: Content is protected !!