Thursday, June 4, 2026
Homeತಾಜಾ ಸುದ್ದಿಒಡಿಶಾ ರೈಲು ದುರಂತ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಅಂತ್ಯ;  ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ,

ಒಡಿಶಾ ರೈಲು ದುರಂತ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಅಂತ್ಯ;  ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ,

- Advertisement -
- Advertisement -

ಒಡಿಶಾ ರೈಲು ದುರಂತ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಅಂತ್ಯವಾಗಿದ್ದು, ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ.ಇಲ್ಲಿಯವರೆಗೆ 1175 ರೋಗಿಗಳನ್ನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅದರಲ್ಲಿ 793 ರೋಗಿಗಳನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಇನ್ನು 382 ರೋಗಿಗಳು ಆಸ್ಪತ್ರೆಯಲ್ಲಿದ್ರೆ, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಉಳಿದವರೆಲ್ಲರೂ ಸ್ಥಿರವಾಗಿದ್ದಾರೆ ಎಂದು ಒಡಿಶಾ ಆರೋಗ್ಯ ಇಲಾಖೆ ತಿಳಿಸಿದೆ.

ಈ ನಡುವೆ ರಕ್ಷಣಾ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಮತ್ತು ಕೊನೆಯ ಬೋಗಿಗೆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಹೇಳಿದ್ದಾರೆ. ಸಾವಿನ ಸಂಖ್ಯೆ 288 ರಷ್ಟಿದೆ ಮತ್ತು ಗಾಯಗೊಂಡವರ ಸಂಖ್ಯೆ 1,000 ಕ್ಕಿಂತ ಹೆಚ್ಚಿದೆ ಎಂದರು.

ಇನ್ನು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿರುವ ಜನರು ಚಿಕಿತ್ಸೆಯ ನಂತ್ರ ಆಸ್ಪತ್ರೆಯಿಂದ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ. ಇನ್ನು ಏಮ್ಸ್ ಭುವನೇಶ್ವರ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ 160 ಶವಗಳನ್ನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

- Advertisement -

Latest News

error: Content is protected !!