Friday, June 5, 2026
Homeತಾಜಾ ಸುದ್ದಿಒಡಿಶಾ ರೈಲು ದುರಂತದ ಬಗ್ಗೆ ಟ್ವೀಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ನಳೀನ್ ಕುಮಾರ್ ಕಟೀಲ್

ಒಡಿಶಾ ರೈಲು ದುರಂತದ ಬಗ್ಗೆ ಟ್ವೀಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಬೆಂಗಳೂರು: ಒಡಿಶಾ ರೈಲು ದುರಂತದ ಬಗ್ಗೆ ಟ್ವೀಟ್ ಮಾಡಲು ಹೋಗಿ ನಳೀನ್ ಕುಮಾರ್ ಕಟೀಲ್ ಯಡವಟ್ಟು ಮಾಡಿಕೊಂಡಿದ್ದಾರೆ.ಟ್ವೀಟ್ ನಲ್ಲಿ ರೈಲು ಬೋಗಿಗಳು ಹೊತ್ತಿ ಉರಿಯುತ್ತಿರುವಂತ ಯಾವುದೋ ಪೋಟೋ ಹಾಕಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದು ಈ ಘಟನೆ ಸಂಬಂಧ ಟ್ವಿಟ್ ಮಾಡಿದ್ದಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ಒಡಿಶಾದಲ್ಲಿ ಸರಣಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕ ಬಂಧುಗಳ ಆತ್ಮಕ್ಕೆ ಸದ್ಗತಿ ಕೋರುತ್ತಾ, ಗಾಯಗೊಂಡಿರುವ ಪ್ರಯಾಣಿಕರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಎಂದಿದ್ದರು. ಆದ್ರೇ ಹೀಗೆ ಟ್ವಿಟ್ ಗೆ ಹಾಕಿದ್ದಂತ ಪೋಟೋ ನಿನ್ನೆಯ ಘಟನೆ ಪೋಟೋ ಆಗಿರಲಿಲ್ಲ.

ಈ ಬಗ್ಗೆ ಅನೇಕರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಮಾಡಿದ್ದಂತ ಟ್ವಿಟ್ಟರ್ ವಿಷಯದ ಪೋಟೋ ಕಂಡು ಹೌಹಾರಿದ್ದರು. ಜೊತೆಗೆ ಅಚ್ಚರಿಯನ್ನು ವ್ಯಕ್ತಪಡಿಸಿ, ಇದು ಒಡಿಶಾದಲ್ಲಿನ ರೈಲುಗಳ ಅಪಘಾತದ ಪೋಟೋವಲ್ಲ. ಬದಲಾಗಿ ವಿದೇಶದಲ್ಲಿ ನಡೆದಿದ್ದಂತ ರೈಲುಗಳ ಮುಖಾಮುಖಿ ಡಿಕ್ಕಿಯ ಪೋಟೋ ಇರಬೇಕು ಎಂಬುದಾಗಿ ಕಮೆಂಟ್ ಮಾಡಿದ್ದರು. ಕೊನೆಗೆ ಎಚ್ಚೆತ್ತುಕೊಂಡು ಫೋಟೋ ಬದಲಾಯಿಸಿದ್ದಾರೆ.

- Advertisement -

Latest News

error: Content is protected !!