Thursday, June 4, 2026
HomeUncategorizedದಕ್ಷಿಣಕನ್ನಡದಲ್ಲಿಂದು 218 ಕೋವಿಡ್ ಪ್ರಕರಣಗಳು ಪತ್ತೆ, ಒಂದೇ ದಿನ 7 ಮಂದಿ ಕೊರಾನಾಗೆ ಬಲಿ

ದಕ್ಷಿಣಕನ್ನಡದಲ್ಲಿಂದು 218 ಕೋವಿಡ್ ಪ್ರಕರಣಗಳು ಪತ್ತೆ, ಒಂದೇ ದಿನ 7 ಮಂದಿ ಕೊರಾನಾಗೆ ಬಲಿ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ 218 ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಅಲ್ಲದೇ ಇಂದು ಒಂದೇ ದಿನ 7 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು ವರದಿಯಾಗಿರುವ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4214 ಕ್ಕೆ ಏರಿಕೆಯಾಗಿದೆ. ಇನ್ನು ಸಂತೋಷದ ವಿಚಾರ ಅಂದ್ರೆ ಇಂದು ಒಂದೇ ದಿನ 301 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಇದುವರೆಗೂ ದಕ್ಷಿಣಕನ್ನಡದಲ್ಲಿ ಕೊರೊನಾಗೆ83 ಮಂದಿ ಬಲಿಯಾಗಿದ್ದಾರೆ. ಅಲ್ಲದೇ 1852 ಮಂದಿ ಕೊರೊನಾದಿಂದ ಇದುವರೆಗೂ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2592 ಸಕ್ರೀಯ ಪ್ರಕರಣಗಳಿವೆ.

ಇನ್ನು ಉಡುಪಿಯಲ್ಲಿ ಇಂದು 160 ಕೇಸುಗಳು ಇಂದು ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 2846ಕ್ಕೆ ಏರಿಕೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 1005 ಸಕ್ರೀಯ ಪ್ರಕರಣಗಳಿವೆ. ಇಂದು 65 ಜನ ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!