Thursday, August 11, 2022
Homeಇತರನೌಕಾಪಡೆಗೂ ತಟ್ಟಿದ ಕೊರೋನಾ ಬಿಸಿ: 21 ನಾವಿಕರಿಗೆ ಕೋವಿಡ್-19 ಸೋಂಕು ದೃಢ

ನೌಕಾಪಡೆಗೂ ತಟ್ಟಿದ ಕೊರೋನಾ ಬಿಸಿ: 21 ನಾವಿಕರಿಗೆ ಕೋವಿಡ್-19 ಸೋಂಕು ದೃಢ

- Advertisement -
- Advertisement -

ನವದೆಹಲಿ: ಮುಂಬಯಿಯಲ್ಲಿರುವ ಭಾರತೀಯ ನೌಕಾಪಡೆಯ 15 ರಿಂದ 20 ನಾವಿಕರಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. ಮುಂಬೈ ನಗರದ ಘಾಟ್ ಕೋಪರ್ ನಲ್ಲಿರುವ ನೌಕಾ ಆಸ್ಪತ್ರೆಯಲ್ಲಿ ಈ ನಾವಿಕರನ್ನು ಕ್ವಾರಂಟೈನ್ ಮಾಡಲಾಗಿದೆ.

ನೌಕಾಪಡೆಯಲ್ಲಿ ವರದಿಯಾಗುತ್ತಿರುವ ಮೊದಲ ಪ್ರಕರಣಗಳು ಇದಾಗಿದೆ. ಪಾಸಿಟಿವ್ ವರದಿ ಬಂದ ನಾವಿಕರು ಐಎನ್ ಎಸ್ ಆಂಗ್ರೆ ಎಂದು ಕರೆಯಲ್ಪಡುವ ವಸತಿಗಳಲ್ಲಿ ತಂಗಿದ್ದರು. ಸರಕು, ಸಾಗಣೆ ಮತ್ತು ಆಡಳಿತ ವ್ಯವಹಾರಗಳಲ್ಲಿನ ನೌಕ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪಶ್ಚಿಮ ನೌಕಾಪಡೆ ಕಮಾಂಡ್ ಗೆ ಐಎನ್ ಎಸ್ ಆಂಗ್ರೆ ಸಹಕಾರಿಯಾಗಿದೆ.

ನಗರದಲ್ಲಿ ಲಾಕ್ ಡೌನ್ ಇದ್ದರೂ ಅಗತ್ಯ ಕರ್ತವ್ಯಗಳಿಗಾಗಿ ನೌಕಾಪಡೆ ವಲಯಗಳಲ್ಲಿ ಸಿಬ್ಬಂದಿ ಸಂಚರಿಸುವ ಸಾಧ್ಯೆ ಇದೆ. ಐಎನ್ ಎಸ್ ಆಂಗ್ರೆಯಿಂದ ಕೇವಲ 100 ಮೀ ಅಂತರದಲ್ಲಿದ್ದ ಯುದ್ಧ ನೌಕಗಳೂ ಹಾಗೂ ಜಲಾಂತರ್ಗಾಮಿ ನೌಕೆಗಳೂ ಇವೆ.

ಈ ಮೊದಲು ಭಾರತೀಯ ಸೇನೆಯ 8 ಜನರಲ್ಲಿ ಈ ವೈರಸ್ ಪತ್ತೆಯಾಗಿತ್ತು. ಇದರಲ್ಲಿ ಇಬ್ಬರು ವೈದ್ಯರು, ಆರೋಗ್ಯ ಸಹಾಯಕರು ಸೇರಿದ್ದರು ಎಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆ ತಿಳಿಸಿದ್ದರು.

- Advertisement -
- Advertisment -

Latest News

error: Content is protected !!