Monday, April 29, 2024
Homeತಾಜಾ ಸುದ್ದಿಕೊರೊನಾ ಸಂಕಷ್ಟದ ನಡುವೆಯೂ ಅದೃಷ್ಟ ತಂದ ಮೀನು

ಕೊರೊನಾ ಸಂಕಷ್ಟದ ನಡುವೆಯೂ ಅದೃಷ್ಟ ತಂದ ಮೀನು

spot_img
- Advertisement -
- Advertisement -

ಪಶ್ಚಿಮ ಬಂಗಾಳ : ಕೊರೊನಾದಿಂದಾಗಿ ಏನೆಲ್ಲಾ ತೊಂದರೆಗಳಾಗುತ್ತಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಎಷ್ಟೋ ಮಂದಿಯ ಬದುಕು ಮೂರಾ ಬಟ್ಟೆಯಾಗಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಕೋವಿಡ್ ನ ಈ ಕಷ್ಟದ ನಡುವೆಯೂ ಅಲ್ಲಿನ ಮೀನುಗಾರರಿಗೆ ಅದೃಷ್ಟ ಖುಲಾಯಿಸಿದೆ.

ಮೀನುಗಾರರಿಗೆ ಅವರ ಟ್ರಾಲರ್​ ಬೋಟ್​ನಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿ ಬೆಲೆ ಬಾಳುವ ಮೀನೊಂದು ದೊರೆತಿದೆ. ಈ ಮೀನು ಸಿಕ್ಕಿರುವುದು ಬೋಟ್​ನವರಿಗೆ ಲಾಟಿರಿ ಹೊಡೆದಂತಾಗಿದೆ. ಈ ಮೀನನ್ನು ನೋಡಲು ಬಂದರಿನಲ್ಲಿ ಜನಸಾಗರವೇ ನೆರೆದಿತ್ತು.

ದಿಘಾದ ಕಡಲ ತೀರಕ್ಕೆ ಬಂದ ಬೋಟ್​ನಲ್ಲಿತ್ತು ಕಪ್ಪು ಬನ್ಣದ ಚಿಲ್​ಶಂಕರ್​ ಮೀನು. ಇದು ಭಾರಿ ಅಪರೂಪ. ಅದರಲ್ಲೂ ಪಶ್ಚಿಮ ಬಂಗಾಳದ ಕಡಲಲ್ಲಿ ಕಾಣ ಸಿಗುವುದೇ ಇಲ್ಲ. ಹೀಗಾಗಿ ಇದಕ್ಕೆ ಭಾರಿ ಬೆಲೆ ಹಾಗೂ ಬೇಡಿಕೆಯಿದೆ.

ಈ ಚಿಲ್​ಶಂಕರ್​ ಮೀನು ಭಾರಿ ಭಾರವಾಗಿರುತ್ತದೆ. ಸೋಮವಾರ ಬಲೆಗೆ ಬಿದ್ದಿರುವ ಮೀನು ಬರೋಬ್ಬರಿ 800 ಕೆಜಿ ತೂಗುತ್ತಿದೆ. ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬೇಕೆಂದರೆ ಹಗ್ಗ ಹಾಕಿ ಎಳೆದೊಯ್ಯಬೇಕಷ್ಟೇ.

ಸ್ಥಳೀಯ ಮೀನುಗಾರಿಕಾ ಸಹಕಾರ ಸಂಘದ ಮಾರುಕಟ್ಟೆಯಲ್ಲಿ ಇದರ ಸಗಟು ಬೆಲೆಯನ್ನು ಪ್ರತಿ ಕೆ.ಜಿಗೆ 2,100 ರೂ. ನಿಗದಿಪಡಿಸಲಾಗಿದೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಇದು 20 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಬಿಕರಿಯಾಗಲಿದೆ.

ಮೀನಿನ ಮೂಳೆ ಹಾಗೂ ಎಣ್ಣೆ ಔಷಧೀಯ ಉದ್ದೇಶಕ್ಕೆ ಬಳಕೆಯಾದರೆ, ಇನ್ನುಳಿದದ್ದು ಖಾದ್ಯವಾಗಿ ಸವಿಯಲ್ಪಡುತ್ತದೆ ಎಂದು ಮೀನುಗಾರರು ಹೇಳಿದ್ದಾರೆ.

- Advertisement -
spot_img

Latest News

error: Content is protected !!