Thursday, June 4, 2026
Homeತಾಜಾ ಸುದ್ದಿಮದುವೆಯಾದ ಒಂದೇ ವರ್ಷಕ್ಕೆ 19 ವರ್ಷದ ಯುವತಿ ದುರಂತ ಅಂತ್ಯ

ಮದುವೆಯಾದ ಒಂದೇ ವರ್ಷಕ್ಕೆ 19 ವರ್ಷದ ಯುವತಿ ದುರಂತ ಅಂತ್ಯ

- Advertisement -
- Advertisement -

ತುಮಕೂರು: ಮದುವೆಯಾದ ಒಂದು ವರ್ಷಕ್ಕೆ 19 ವರ್ಷದ ಯುವತಿಯೊಬ್ಬಳು ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ.

ಐಶ್ವರ್ಯ (19) ಮೃತ ದುರ್ದೈವಿ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದ ಉದಯ್ ಮತ್ತು ಅನಿತಾ ದಂಪತಿ ಪುತ್ರಿ ಐಶ್ವರ್ಯಳ ಮದುವೆ ಕಳೆದ ವರ್ಷ ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಜತೆ ಆಗಿತ್ತು. ನಾಗರಾಜು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ತುಮಕೂರು ನಗರದ ಸರಸ್ವತಿ ಪುರಂನಲ್ಲಿ ವಾಸಿಸುತ್ತಿದ್ದರು. 

ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಐಶ್ವರ್ಯಳ ಶವ ಪತ್ತೆಯಾಗಿದೆ. ನನ್ನ ಮಗಳಿಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಐಶ್ವರ್ಯಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪಾಲಕರು ಮಹಿಳಾ ಠಾಣೆಯಲ್ಲಿ‌ ದೂರು ನೀಡಿದ್ದಾರೆ. ಸಿಪಿಐ ರಾಧಾಕೃಷ್ಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಶ್ವರ್ಯಳ ಗಂಡ ನಾಗರಾಜು ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!