Friday, June 5, 2026
Homeಕರಾವಳಿಮಂಗಳೂರುಮಂಗಳೂರು; ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣು

ಮಂಗಳೂರು; ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಮಂಗಳೂರು; ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು, ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ ನಡೆದಿದೆ. ನೇಪಾಳ ಮೂಲದ ರಬೀನ (16) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ರಬೀನಾ ತಂದೆ ನೇಪಾಳ ಮೂಲದ ರಾಮ್ ಶರಣ್ ತೊಕ್ಕೊಟ್ಟುನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು,  ನೇಪಾಳ ಪತ್ನಿ ಮತ್ತು ನಾಲ್ಕು ಮಕ್ಕಳೊಂದಿಗೆ ಚೆಂಬುಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ರಾಮ್ ಶರಣ್ ಅವರ ಎರಡನೇ ಮಗಳಾದ ರಬೀನಾ ನೇಪಾಳದಲ್ಲಿ ಎಂಟನೇ ತರಗತಿ ಓದುತ್ತಿದ್ದು, ಆಕೆಯನ್ನು ಮಂಗಳೂರಲ್ಲೇ ಓದಿಸುವ ಸಲುವಾಗಿ ತಿಂಗಳ ಹಿಂದೆ ಪೋಷಕರು ತೊಕ್ಕೊಟ್ಟಿಗೆ ಕರೆ ತಂದಿದ್ದರು.

ಆದರೆ ರಬೀನ ತಾನು ನೇಪಾಳದಲ್ಲೇ ಓದು ಮುಂದುವರಿಸೋದಾಗಿ ಹಠ ಹಿಡಿದಿದ್ದಳು.ನಿನ್ನೆ ಮಧ್ಯಾಹ್ನ ರಬೀನಾಳ ತಾಯಿ‌ ರಮೀಲಾ ಅವರು ಚಿಕ್ಕ ಮಕ್ಕಳನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಹೋಗಿದ್ದ ವೇಳೆ ರಬೀನಾ ಮನೆಯ ಶೌಚಾಲಯದ ಕಬ್ಬಿಣದ ಸಲಾಕೆಗೆ ಚೂಡಿದಾರದ ಶಾಲಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉಳ್ಳಾಲ ಠಾಣಾ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!