Saturday, June 6, 2026
Homeಕರಾವಳಿಆಗಸ್ಟ್ 5 ರಂದು ಮಂಗಳೂರಿನಲ್ಲಿ ನಿಷೇದಾಜ್ಞೆ: 144 ಸೆಕ್ಷನ್ ಜಾರಿ

ಆಗಸ್ಟ್ 5 ರಂದು ಮಂಗಳೂರಿನಲ್ಲಿ ನಿಷೇದಾಜ್ಞೆ: 144 ಸೆಕ್ಷನ್ ಜಾರಿ

- Advertisement -
- Advertisement -

ಮಂಗಳೂರು: ಆಗಸ್ಟ್ 5 ರಂದು ರಾಮ ಮಂದಿರದ ಭೂಮಿ ಪೂಜೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಆಗಸ್ಟ್ 5 ರಂದು 144 ಸೆಕ್ಷನ್ ಜಾರಿ ಮಾಡಲಾಗಿದೆ.

ಆಗಸ್ಟ್ 4ರ ರಾತ್ರಿ 8 ಗಂಟೆಯಿಂದ ಆಗಸ್ಟ್ 6ರ ಬೆಳಿಗ್ಗೆ 6 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ವಿಕಾಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜಾನಾ ದಿನದಂದು ಹಿಂದೂ ಸಂಘಟನೆಗಳು ಸಂಭ್ರಮಾಚರಣೆ ಮತ್ತು ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆಗೂ ಸಿದ್ಧತೆ ಮಾಡಿಕೊಂಡಿರುವ ಕುರಿತು ಮಾಹಿತಿ ಪೊಲೀಸ್ ಇಲಾಖೆಗೆ ತಲುಪಿರುವ ಕಾರಣ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆಕ್ಷನ್ 144ರಡಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ. ನಿಷೇಧಾಜ್ಞೆ ಉಲ್ಲಂಘಿಸದಂತೆ ಮಂಗಳೂರು ಕಮೀಷನರ್ ಖಡಕ್ ಆದೇಶ ನೀಡಿದ್ದಾರೆ.

- Advertisement -

Latest News

error: Content is protected !!