Saturday, June 6, 2026
Homeಕರಾವಳಿಧೈರ್ಯ ಅನ್ನೋ ಅಸ್ತ್ರದಿಂದಲೇ ಕೊರೊನಾ ಗೆದ್ದ ಮಂಗಳೂರಿನ ಒಂದೇ ಕುಟುಂಬದ 11 ಮಂದಿ

ಧೈರ್ಯ ಅನ್ನೋ ಅಸ್ತ್ರದಿಂದಲೇ ಕೊರೊನಾ ಗೆದ್ದ ಮಂಗಳೂರಿನ ಒಂದೇ ಕುಟುಂಬದ 11 ಮಂದಿ

- Advertisement -
- Advertisement -

ಮಂಗಳೂರು; ಕೊರೊನಾದಿಂದ ಇವತ್ತು ಭಯಪಟ್ಟು ಅಪಾಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚು.ಆದ್ರೆ ಧೈರ್ಯದಿಂದ ಇದ್ರೆ ಕೊರೊನಾವನ್ನು ಸುಲಭವಾಗಿ ಗೆಲ್ಲಬಹುದು ಅಂತಾ ಮಂಗಳೂರಿನ ಕುಟುಂಬವೊಂದು ಸಾಧಿಸಿ ತೋರಿಸಿದೆ.

ಹೌದು… ಮಂಗಳೂರಿನ  ಕೊಟ್ಟಾರದ ಒಂದೇ ಕುಟುಂಬದ ಮಗು ಸಹಿತ 11 ಮಂದಿಗೆ ಕೊರೊನಾ ಕಾಣಿಸಿಕೊಂಡಿತ್ತು.  ಆದೆರ ಯಾರೂ ಹೆದರದೇ ಮನೆಯಲ್ಲೇ ಇದ್ದು ವೈದ್ಯರ ಸಲಹೆಯಂತೆ ಔಷಧ, ಆಹಾರ ಸೇವಿಸಿ ಗುಣಮುಖರಾಗಿದ್ದಾರೆ.ಆ ಮೂಲಕ ಧೈರ್ಯದಿಂದ ಕೊರೊನಾವನ್ನು ಎದುರಿಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.

54 ವರ್ಷದ ಪೂರ್ಣಿಮಾ ಮತ್ತು 58 ವರ್ಷದ ರಾಜ್‌ಗೋಪಾಲ್ ರೈ ದಂಪತಿ, ಅವರ 27 ಮತ್ತು 25 ವರ್ಷದ ಮಕ್ಕಳು ಹಾಗೂ ಮುಂಬಯಿಯಿಂದ ಬಂದಿದ್ದ 68 ವರ್ಷ, 62 ವರ್ಷ, 58 ವರ್ಷ, 32 ವರ್ಷ, 30 ವರ್ಷ, 26 ವರ್ಷದ ಅವರ ಸಂಬಂಧಿಕರು ಹಾಗೂ 2 ವರ್ಷದ ಒಂದು ಮಗು ಕೂಡ ಸೋಂಕಿಗೆ ಒಳಗಾಗಿದ್ದರು.  ಹೀಗೆ 11 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಮೊದಲು ರಾಜ್ ಗೋಪಾಲ್ ರೈ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಅವರು ಕುಟುಂಬ ವೈದ್ಯರಿಗೆ ಕರೆ ಮಾಡಿ ಅವರ ಸಲಹೆಯಂತೆ ರಕ್ತ ಪರೀಕ್ಷೆ ಮಾಡಿಸಿ ಮಾತ್ರೆ ಸೇವಿಸಿದ್ದಾರೆ. ಅಷ್ಟರಲ್ಲಿ ಉಳಿದವಿರಗೂ ಸೋಂಕು ಕಾಣಿಸಿಕೊಂಡಿದೆ. ಎಲ್ಲರೂ ಮನೆಯಲ್ಲೇ ಇದ್ದು ವೈದ್ಯರ ಸಲಹೆಯಂತೆ ದ್ರವಾಹಾರ ಸೇವಿಸಿದ್ದಾರೆ. ಅಲ್ಲದೇ ಮುಖ್ಯವಾಗಿ ಧೈರ್ಯದಿಂದ ಪರಿಸ್ಥಿತಿ ನಿಭಾಯಿಸಿದ್ದಾರೆ.

ಇನ್ನು ಮನೆಯಲ್ಲಿ ಆಕ್ಸಿಜನ್ ಲೆವಲ್ ಪರೀಕ್ಷಿಸುತ್ತಲೇ ಇದ್ರು. ಅಲ್ಲದೇ ಸ್ವತಃ ಸೋಂಕಿಗೆ ಒಳಗಾಗಿದ್ದ ಪೂರ್ಣಿಮಾ ಅವರೇ ಉಳಿದವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದ್ದಾರೆ.ಅಲ್ಲದೇ ಧೈರ್ಯ ತುಂಬಿದ್ದಾರೆ. ಆ ಮೂಲಕ ಇಡೀ ಕುಟುಂಬದವರು ಕೊರೊನಾ ಗೆದ್ದಿದ್ದಾರೆ.

- Advertisement -

Latest News

error: Content is protected !!