Saturday, June 27, 2026
Homeತಾಜಾ ಸುದ್ದಿರಾಜ್ಯಕ್ಕೂ ಕಾಲಿಟ್ಟ ಬ್ಲ್ಯಾಕ್ ಫಂಗಸ್: ಮೈಸೂರಿನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆ

ರಾಜ್ಯಕ್ಕೂ ಕಾಲಿಟ್ಟ ಬ್ಲ್ಯಾಕ್ ಫಂಗಸ್: ಮೈಸೂರಿನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆ

- Advertisement -
- Advertisement -

ಮೈಸೂರು : ರಾಜ್ಯಕ್ಕೂ ಬ್ಲಾಕ್ ಫಂಗಸ್ ಸೋಂಕು ಕಾಲಿಟ್ಟಿದೆ. ಮೈಸೂರಿನಲ್ಲಿ ಇಬ್ಬರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿರೋದಾಗಿ, ಸ್ವತಃ  ಸಚಿವ ಎಸ್ ಟಿ ಸೋಮಶೇಖರ್ ದೃಢಪಡಿಸಿದ್ದಾರೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಅವರು, ಮೈಸೂರಿನಲ್ಲಿ ಇಬ್ಬರಿಗೆ ಬ್ಲಾಕ್ ಫಂಗಸ್ ತಗುಲಿರೋದು ತಿಳಿದು ಬಂದಿದೆ. ಬ್ಲಾಕ್ ಫಂಗಸ್ ಮಾರಣಾಂತಿಕ ಸೋಂಕು ಅಲ್ಲ. ಇದೊಂದು ಮಾರಣಾಂತಿಕ ಖಾಯಿಲೆ ಕೂಡ ಅಲ್ಲ ಎಂದಿದ್ದಾರೆ.

ಅಂದಹಾಗೇ ಕೊರೋನಾ ಸೋಂಕಿನ ಅಬ್ಬರ ನಡುವೆಯೂ ಬ್ಲಾಕ್ ಫಂಗಸ್ ಮತ್ತಷ್ಟು ಭಯ ಪಡಿಸಿತ್ತು. ದೇಶದಲ್ಲಿ ಬ್ಲಾಕ್ ಫಂಗಸ್ ಮಾರಣಾಂತಿಕ ರೋಗವಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಇದೀಗ ಇಂತಹ ರೋಗವು ರಾಜ್ಯಕ್ಕೂ ಕಾಲಿಟ್ಟಿದೆ. ಆದರೆ ಆತಂಕ ಪಡುವ ಅಗತ್ಯ ಎಂದಿದ್ದಾರೆ.

- Advertisement -

Latest News

error: Content is protected !!