Sunday, June 7, 2026
Homeತಾಜಾ ಸುದ್ದಿಕೊರೊನಾ ಗೆದ್ದ 104 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್ ದೊರೆಸ್ವಾಮಿ

ಕೊರೊನಾ ಗೆದ್ದ 104 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್ ದೊರೆಸ್ವಾಮಿ

- Advertisement -
- Advertisement -

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ 104 ವರ್ಷದ ಹಿರಿಯ ಜೀವ ಎಚ್‌ಎಸ್ ದೊರೆಸ್ವಾಮಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವೈದ್ಯರು ಮತ್ತು ಸಿಬ್ಬಂದಿ ದೊರೆಸ್ವಾಮಿ ಅವರ ಆರೈಕೆ ಮಾಡಿದ್ದಾರೆ.

ಕೊರೊನಾ ಅಲೆ ಆರ್ಭಟ ನಿಧಾನವಾಗಿ ತಗ್ಗುತ್ತಿದೆ, ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ.ನಾಡಿನ ಹಿರಿಯ ಚೇತನ, ಸ್ವಾತಂತ್ರ್ಯ ಹೋರಾಟಗಾರ, ಎಚ್.ಎಸ್. ದೊರೆಸ್ವಾಮಿ ಅವರು ತಮ್ಮ 104ನೇ ವಯಸ್ಸಿನಲ್ಲೂ ಕೊರೊನಾ ಗೆದ್ದು, ಮಾದರಿಯಾಗಿದ್ದಾರೆ. ಹಾಗಾಗಿ ಕೊರೊನಾ ಬಗ್ಗೆ ಭಯಬೇಡ. ಎಲ್ಲರೂ ಎಚ್ಚರಿಕೆಯಿಂದಿರಿ..

- Advertisement -

Latest News

error: Content is protected !!