Thursday, June 4, 2026
Homeಕರಾವಳಿಉಡುಪಿಹತ್ತನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು

ಹತ್ತನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು

- Advertisement -
- Advertisement -

ಬ್ರಹ್ಮಾವರ: ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚಾಂತಾರು ಎಂಬಲ್ಲಿ ನಡೆದಿದೆ.

ಅನುಶ್ರೀ ಆತ್ಮಹತ್ಯೆಗೆ ಶರಣಾದ ಬಾಲಕಿ. ಅನುಶ್ರೀ ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯ ಪುತ್ರಿ.  ಆಕೆ ಅದೇ ಶಾಲೆಯ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.

ನಿನ್ನೆ ಸಂಜೆ ಅನುಶ್ರೀ ತಾಯಿ ಮನೆಗೆ ಬಂದಾಗ ಮಗಳು ನೇಣು ಬಿಗಿದ ಸ್ಥಿತಿಯಲ್ಲಿದ್ದು, ಗಾಬರಿಗೊಂಡ ತಾಯಿಯು ಸಮೀಪದದಲ್ಲಿದ್ದ ನಿರ್ಮಾಣ ಕಟ್ಟಡದ ಕೂಲಿ ಕಾರ್ಮಿಕರನ್ನು ಕರೆದು ನೇಣು ಕುಣಿಕೆಯಿಂದ ತಪ್ಪಿಸಿ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಇನ್ನು ಈಕೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Latest News

error: Content is protected !!