Monday, May 6, 2024
Homeತಾಜಾ ಸುದ್ದಿಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಹಿಳೆಯರು ನಿರ್ದೇಶಿಸಿದ 10 ಸಿನಿಮಾ ಪ್ರದರ್ಶನ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಹಿಳೆಯರು ನಿರ್ದೇಶಿಸಿದ 10 ಸಿನಿಮಾ ಪ್ರದರ್ಶನ

spot_img
- Advertisement -
- Advertisement -

ಬೆಂಗಳೂರು: 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೆ.29 ಗುರುವಾರದಂದು ಉದ್ಘಾಟನೆಗೊಳ್ಳಲಿದ್ದು, ಈ ಬಾರಿಯ ಚಿತ್ರೋತ್ಸವದಲ್ಲಿ ಮಹಿಳಾ ಧ್ವನಿಗೆ ಆದ್ಯತೆ ದೊರಕಿದೆ. ಮಹಿಳೆಯರು ನಿರ್ದೇಶಿಸಿದ 10 ಸಿನಿಮಾಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ.

ನಿರ್ದೇಶಕಿಯರ ಜೊತೆಗೆ ಲೇಖಕಿಯರ ಸಂಘದ ಸಂವಾದ, ಚರ್ಚೆಯೂ ಈ ವರ್ಷದ ವಿಶೇಷತೆಗಳಲ್ಲಿ ಒಂದಾಗಿದೆ.

ಚಿತ್ರೋತ್ಸವ ಸಮಿತಿಯ ಅಧ್ಯಕ್ಷ ಕೆ.ವಿ. ತ್ರಿಲೋಕ್ ಚಂದ್ರ, ‘ವಿಧಾನಸೌಧದ ಮುಂಭಾಗ ಫೆ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ‘ಸಿಂಹಾಸನ್’, ‘ಸಾಮ್ರಾ’, ‘ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್’ ಸಿನಿಮಾ ಖ್ಯಾತಿಯ ನಿರ್ದೇಶಕ ಜಬ್ಬಾರ್ ಪಟೇಲ್, ನಟ ಶಿವರಾಜ್‌ಕುಮಾರ್, ಬಾಂಗ್ಲಾದೇಶದ ನಟಿ ಅಜಮೇರಿ ಬಂದೋನ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿ 50ಕ್ಕೂ ಅಧಿಕ ದೇಶಗಳ 185 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

‘ಈ ಋತುವಿನ ಭಾರತದ ಯಾವುದೇ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣದ 30ಕ್ಕೂ ಅಧಿಕ ಭಾರತೀಯ ಸಿನಿಮಾಗಳ ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಾಣಲಿವೆ. ಈ ಬಾರಿಯ 21 ತೀರ್ಪುಗಾರರ ಪೈಕಿ 9 ಮಹಿಳೆಯರಿದ್ದರು. ಈ ಪೈಕಿ ಹಲವರು ವಿದೇಶದವರು. ಜೊತೆಗೆ ಈ ಬಾರಿಯ ವಿಚಾರ ಸಂಕಿರಣಗಳು, ಸಂವಾದ, ಉಪನ್ಯಾಸ, ಕಾರ್ಯಾಗಾರಗಳಲ್ಲಿ ಸಿನಿಮಾ ರಂಗದಲ್ಲಿ ಇರುವ 52ಕ್ಕೂ ಅಧಿಕ ಮಹಿಳೆಯರು ಭಾಗವಹಿಸಲಿದ್ದಾರೆ. ಭಾರತೀಯ ಸಾಂವಿಧಾನಿಕ ಮೌಲ್ಯಗಳು ಮತ್ತು ಭಾರತೀಯ ಸಿನಿಮಾ’ ಎಂಬ ವಿಷಯದಡಿ ನಿರ್ದೇಶಕ ಜಬ್ಬಾರ್ ಪಟೇಲ್‌ ಉಪನ್ಯಾಸ ನೀಡಲಿದ್ದಾರೆ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ತಿಳಿಸಿದರು.

- Advertisement -
spot_img

Latest News

error: Content is protected !!