Thursday, May 16, 2024
Homeಕರಾವಳಿಮನೆಯ ಕಟ್ಟಡದ ಎರಡನೇ ಮಹಡಿಯಲ್ಲಿ ಪೈಂಟಿಂಗ್ ಕೊಡುತ್ತಿದ್ದ ಯುವಕ ಬಿದ್ದು ಮೃತ್ಯು

ಮನೆಯ ಕಟ್ಟಡದ ಎರಡನೇ ಮಹಡಿಯಲ್ಲಿ ಪೈಂಟಿಂಗ್ ಕೊಡುತ್ತಿದ್ದ ಯುವಕ ಬಿದ್ದು ಮೃತ್ಯು

spot_img
- Advertisement -
- Advertisement -

ಮಂಗಳೂರು: ಶಕ್ತಿನಗರದ ಮನೆಯೊಂದರಲ್ಲಿ ಎರಡನೇ ಮಹಡಿಯಲ್ಲಿ ಪೈಟಿಂಗ್ ಕೆಲಸ ಮಾಡುತ್ತಿದ್ದ ಯುವಕನೋರ್ವ ಮನೆಯ ಕಟ್ಟಡದಿಂದ ಏಣಿಯ ಜೊತೆಯಲ್ಲೇ ಆಯತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಯುವಕ ಕುಡುಪು ಕೊಂಚಾಡಿ ನಿವಾಸಿ ಮೋಹಿತ್ ಪೂಜಾರಿ(26) ಎಂದು ಗುರುತಿಸಲಾಗಿದೆ.

ಈತನು ಮಂಗಳೂರಿನ ಶಿವ ಎಂಡ್ ಡೆಕೋರೇಟರ್ಸ್ ಮಾಲಕ ಚಂದ್ರಶೇಖರ್ ಅವರ ಮನೆಯಲ್ಲಿ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಎರಡನೇ ಮಹಡಿಯಲ್ಲಿ ಹೊರಭಾಗದ ಗೋಡೆಗೆ ಪೈಂಟ್ ಮಾಡುತ್ತಿದ್ದಾಗ ಏಣಿ ಜಾರಿ ಹೊರಕ್ಕೆ ಬಿದ್ದಿದೆ. ಮೋಹಿತ್ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ಯುವ ಮೊದಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮೋಹಿತ್ ಅವರ ಸೋದರ ಮಾವ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!