Sunday, May 19, 2024
Homeಕರಾವಳಿ5 ದಶಕಗಳ ಇತಿಹಾಸವಿರುವ ನಗರದ ‘ಬಿಕರ್ನಕಟ್ಟೆ ಸಂತೆ’ ಹೆದ್ದಾರಿ ಪಾಲು?

5 ದಶಕಗಳ ಇತಿಹಾಸವಿರುವ ನಗರದ ‘ಬಿಕರ್ನಕಟ್ಟೆ ಸಂತೆ’ ಹೆದ್ದಾರಿ ಪಾಲು?

spot_img
- Advertisement -
- Advertisement -

ಬಿಕರ್ನಕಟ್ಟೆ: ಮಂಗಳೂರು ನಗರದ ವ್ಯಾಪ್ತಿಯಲ್ಲಿರುವ ಸುಮಾರು ಐದು ದಶಕಗಳ ಇತಿಹಾಸವಿರುವ ‘ಏಕೈಕ ಸಂತೆ’ ಎಂದು ಹೆಸರು ಪಡೆದ ಬಿಕರ್ನಕಟ್ಟೆ ಕೈಕಂಬದ ‘ಶನಿವಾರ ಸಂತೆ’ಯು ರಾಷ್ಟ್ರೀಯ ಹೆದ್ದಾರಿ 169 ವಿಸ್ತರಣೆ ಕಾರಣಕ್ಕೆ ಬಲಿಯಾಗುವ ಸಾಧ್ಯತೆ ದಟ್ಟವಾಗಿರುವುದು ಕಂಡು ಬರುತ್ತಿದೆ.

ಶನಿವಾರ ಸಂತೆ ನಡೆಯುವ ಮೈದಾನ ರಾ.ಹೆ.73 ಮತ್ತು ರಾ.ಹೆ. 169 ಸಂಧಿಸುವ ಪ್ರದೇಶದಲ್ಲಿದೆ. ರಾ.ಹೆ.169ರ ಮಂಗಳೂರು ಕಾರ್ಕಳ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು, ಕುಡುಪು ವರೆಗೆ ಕಾಮಗಾರಿ ನಡೆಯುತ್ತಿದೆ. ಪದವು ಗ್ರಾಮದ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿರುವ ಕಾರಣದಿಂದ ಈಗ ಯಾವುದೇ ಬೆಳವಣಿಗೆ ನಡೆದಿಲ್ಲ.

ಸದ್ಯದ ಲೆಕ್ಕಾಚಾರದಂತೆ ಸಂತೆ ಇರುವ ಜಾಗ ರಸ್ತೆ ವಿಸ್ತರಣೆಗೆ ಮಾರ್ಕಿಂಗ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!