Thursday, June 4, 2026
Homeಕರಾವಳಿಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ಪ್ರವಾಸಿಗರ ಕಾರು ತಪಾಸಣೆ; ದಾಖಲೆಗಳಿಲ್ಲದ 1 ಲಕ್ಷ ರೂಪಾಯಿ ವಶ ಪಡಿಸಿಕೊಂಡ ಪೊಲೀಸರು

ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ಪ್ರವಾಸಿಗರ ಕಾರು ತಪಾಸಣೆ; ದಾಖಲೆಗಳಿಲ್ಲದ 1 ಲಕ್ಷ ರೂಪಾಯಿ ವಶ ಪಡಿಸಿಕೊಂಡ ಪೊಲೀಸರು

- Advertisement -
- Advertisement -

ಕೊಟ್ಟಿಗೆಹಾರ;  ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ಪ್ರವಾಸಿಗರ ಕಾರು ತಪಾಸಣೆ ವೇಳೆ ದಾಖಲೆಗಳಿಲ್ಲದ 1 ಲಕ್ಷ ರೂಪಾಯಿ ವಶ ಪಡಿಸಿಕೊಂಡ ಪೊಲೀಸರು ವಶ ಪಡಿಸಿಕೊಂಡ ಘಟನೆ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಧರ್ಮಸ್ಥಳದಿಂದ ಕೊಟ್ಟಿಗೆಹಾರದ ಕಡೆಗೆ ಬರುತ್ತಿದ್ದ ರಾಮನಗರ ಮೂಲದ ಕಾರನ್ನು ಪರಿಶೀಲಿಸುವ ವೇಳೆ ಕಾರಿನ ಮುಂದಿನ ಡ್ಯಾಶ್ ಬೋರ್ಡ್‍ನಲ್ಲಿ ದಾಖಲೆಗಳಿಲ್ಲದ 1 ಲಕ್ಷ ರೂ ಪತ್ತೆಯಾಗಿದೆ. ಈ ಹಣದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದ ಹಿನ್ನಲೆಯಲ್ಲಿ ಪೊಲೀಸರು ವಾಹನ ಮತ್ತು ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸ್ಥಳಕ್ಕೆ  ವೃತ್ತ ನಿರೀಕ್ಷಕ ಸೋಮೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮನಗರದ 7 ಮಂದಿ ಕಾರಿನಲ್ಲಿ ಧರ್ಮಸ್ಥಳದಿಂದ ಹಿಂದಿರುಗುತ್ತಿದ್ದ ವೇಳೆ ಕೊಟ್ಟಿಗೆಹಾರದಲ್ಲಿ ವಾಹನ ತಪಾಸಣೆ ನಡೆಸಿದ್ದರು. ಪ್ರವಾಸಕ್ಕೆಂದು ಬಂದವರು ಪ್ರವಾಸಕ್ಕೆ ವೆಚ್ಚವಾಗುವ ಹಣವನ್ನು ಒಂದೆಡೆ ಇಟ್ಟುಕೊಂಡಿದ್ದೆವು. ಹಣ ಮತ್ತು ವಾಹನ ವಶಪಡಿಸಿಕೊಂಡಿರುವುದು ಯಾತ್ರಾಸ್ಥಳಕ್ಕೆ ಬಂದಿದ್ದ ನಮಗೆ ತೊಂದರೆ ಅನುಭವಿಸುವಂತಾಗಿದೆ. ಚುನಾವಣೆ ಉದ್ದೇಶಕ್ಕೆ ಹಣ ಸಾಗಿಸುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲಿ. ಆದರೆ ಯಾತ್ರಾಸ್ಥಳಕ್ಕೆ ಬರುವ ಪ್ರವಾಸಿಗರು ಪ್ರವಾಸ ಖರ್ಚಿಗೆ ಹಣ ಇಟ್ಟುಕೊಂಡು ಬಂದಿರುತ್ತಾರೆ. ಇದನ್ನು ವಶ ಪಡಿಸಿಕೊಂಡಿರುವುದು ಬೇಸರ ಉಂಟು ಮಾಡಿದೆ ಎಂದು ಪ್ರವಾಸಿಗರು ಬೇಸರ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!