Friday, May 17, 2024
Homeಕರಾವಳಿಪುತ್ತೂರಿನ ಹಲವು ಗ್ರಾಮಗಳ ರಸ್ತೆ ಅಭಿವೃದ್ಧಿಗೆ 1. 70 ಕೋಟಿ ರೂ ಬಿಡುಗಡೆ

ಪುತ್ತೂರಿನ ಹಲವು ಗ್ರಾಮಗಳ ರಸ್ತೆ ಅಭಿವೃದ್ಧಿಗೆ 1. 70 ಕೋಟಿ ರೂ ಬಿಡುಗಡೆ

spot_img
- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ಸರ್ಕಾರ 1.70 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮಕ್ಕೆ ಮೀಸಲಾದ ಮೊತ್ತದ ವಿವರ: ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಡಂದೇಲು ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ 724 ಲಕ್ಷ, ಕೆದಿಲ ಗ್ರಾಮದ ಭಗವಂತಕೋಡಿ ಮುರುರ ಪಾಟ್ರುಕೋಡಿಗೆ 717 ಲಕ್ಷ, ಕೊಳ್ಳಿಗೆ ಗ್ರಾಮದ ಪರ್ಲಂಪಾಡಿ ಕಣಿಯಾರು ಪರಿಶಿಷ್ಟ ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ 78 ಲಕ್ಷ ಕೊಳ್ಳಿಗೆ ಗ್ರಾಮದ ಬೈಲೋಡಿ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣಕ್ಕೆ 75 ಲಕ್ಷ, ಕೆದಂಬಾಡಿ ಗ್ರಾಮದ ನಿಡ್ಯಾಣ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ 710 ಲಕ್ಷ, ಬಲ್ನಾಡು ಗ್ರಾಮದ ಸಾರ್ಯ ಕೋಡಿಯಡ್ಕ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ 710 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ರಸ್ತೆಗೆ 715 ಲಕ್ಷ, ಬಂಟ್ವಾಳ ತಾಲೂಕು ಬಿಳಿಯಾರು ಗ್ರಾಮದ ಪೆಜಿಕುಡೆಗುಂಡಿ ರಸ್ತೆಗೆ 710 ಲಕ್ಷ, ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದ ರಸ್ತೆಗೆ 15 ಲಕ್ಷ, ಪುತ್ತೂರು ತಾಲೂಕು 34-ನೆಕ್ಕಿಲಾಡಿ ದರ್ಬೆ ಕಟ್ಟೆಯ ಬಳಿ ಇರುವ ರಸ್ತೆ ಕಾಂಕ್ರೀಟಿಕರಣಕ್ಕೆ 75 ಲಕ್ಷ, ಕೋಡಿಂಬಾಡಿ ಗ್ರಾಮದ ಕಲ್ಪನೆ-ಪಿಲಿಗುಂಡ ರಸ್ತೆಗೆ 210 ಲಕ್ಷ, ಕೋಡಿಂಬಾಡಿ ಗ್ರಾಮದ ದಾರಂದ ಕುಕ್ಕು-ಬದಿನಾರು ರಸ್ತೆಗೆ 710 ಲಕ್ಷ, ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪಾಡಿ ಗ್ರಾಮದ ಕಠಾರ ಕೊಡಿಮಾರ ರಸ್ತೆಗೆ 710 ಲಕ್ಷ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪಾಲೆದ ಕೋಡಿ ಕೂಡ್ಲೆ ರಸ್ತೆಗೆ 710 ಲಕ್ಷ ಹಾಗೂ ಕೊಡಿಂಬಾಡಿ ಗ್ರಾಮದ-ಕಜೆ-ಬೆಳ್ಳಿಪ್ಪಾಡಿ ರಸ್ತೆಗೆ 710 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರು ಪ್ರಕಟಣೆಗೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!