Monday, June 8, 2026
Homeಕರಾವಳಿಮಹಿಳೆಯಿಂದ ಓಟಿಪಿ ನಂಬರ್ ಪಡೆದು 1.46 ಲಕ್ಷ ವಂಚನೆ ಪ್ರಕರಣ

ಮಹಿಳೆಯಿಂದ ಓಟಿಪಿ ನಂಬರ್ ಪಡೆದು 1.46 ಲಕ್ಷ ವಂಚನೆ ಪ್ರಕರಣ

- Advertisement -
- Advertisement -

ನೆಲ್ಯಾಡಿ: ಬ್ಯಾಂಕಿನ ಸಿಬ್ಬಂದಿಗಳು ವ್ಯವಹರಿಸುವ ರೀತಿಯಲ್ಲೇ ಮಹಿಳೆಯೊಂದಿಗೆ ವ್ಯವಹರಿಸಿ ಓಟಿಪಿ ಪಡೆದುಕೊಂಡ ಸೈಬರ್ ಕಳ್ಳರು ಮಹಿಳೆಗೆ 1.46 ಲಕ್ಷ ರೂ ವಂಚಿಸಿದ್ದಾರೆ.

ಕೊಕ್ಕಡ ನಿವಾಸಿ ಹರಿಣಿ (40ವ.) ವಂಚನೆಗೊಳಗಾದವರು. ಅ.21ರಂದು ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಹರಿಣಿ ಮೊಬೈಲ್ ಗೆ ಕರೆ ಮಾಡಿದ ಅಪರಿಚಿತರು, ಓಟಿಪಿಯನ್ನು ಪಡೆದುಕೊಂಡು 1,46,900ರೂ.ವರ್ಗಾಯಿಸಿಕೊಂಡಿದ್ದಾರೆ. ಅವರು 1 ವಾರದ ಹಿಂದೆ ಜಮೀನು ಮಾರಾಟದ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿದ್ದರು.

ಈ ಬಗ್ಗೆ ಹರಿಣಿಯವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 82/2023, ಕಲಂ:419, 420 ಐಪಿಸಿ ಮತ್ತು ಕಲಂ 66(ಸಿ) 66(ಡಿ) ಐಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!