Wednesday, July 1, 2026
Homeಕರಾವಳಿಉಡುಪಿಉಡುಪಿ : ಗೋವಾದ ಲಾಡ್ಜ್  ವೊಂದರಲ್ಲಿ ಮಲ್ಪೆಯ ಯುವಕ ಅನುಮಾನಾಸ್ಪದವಾಗಿ ಸಾವು

ಉಡುಪಿ : ಗೋವಾದ ಲಾಡ್ಜ್  ವೊಂದರಲ್ಲಿ ಮಲ್ಪೆಯ ಯುವಕ ಅನುಮಾನಾಸ್ಪದವಾಗಿ ಸಾವು

- Advertisement -
- Advertisement -

ಉಡುಪಿ : ಗೋವಾದ ಕ್ಯಾಲಂಗುಟ್ ಬೀಚ್ ನ ಲಾಡ್ಜ್  ವೊಂದರಲ್ಲಿ ಮಲ್ಪೆಯ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸಂದೀಪ್ ಸಾಲ್ಯಾನ್ ಮೃತ ಯುವಕ.

ಸಂದೀಪ್ ಎರಡು ದಿನದ ಹಿಂದೆ ಸ್ನೇಹಿತರ ಜೊತೆ ಗೋವಾಕ್ಕೆ ಪ್ರವಾಸಕ್ಕೆ ಹೋಗಿದ್ದ. ಜೂ. 30 ರಂದು ಸಂಜೆ ಆತ ಲಾಡ್ಜ್ ನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಈ ಸಾವು ಹೃದಯಾಘಾತದಿಂದ ಆಗಿದೆಯೋ ಅಥವಾ ಕೊಲೆಯೋ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ. ಸಂದೀಪ್ ಜೊತೆ ಒಂದು ಯುವತಿ ಇದ್ದಳು, ಸಾವಿನ ನಂತರ ಆಕೆ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಸಂದೀಪ್ ಕೆಲವು ವರ್ಷಗಳ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಜೊತೆಗೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮಲ್ಪೆ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ನಡೆಸುತ್ತಿದ್ದರು ಎನ್ನಲಾಗಿದೆ.

ಸಂದೀಪ್ ಬಹಳ ಸ್ನೇಹ ಜೀವಿಯಾಗಿದ್ದರು ಮತ್ತು ಸಮಾಜ ಸೇವೆಯ ಕೆಲಸಗಳನ್ನು ಮಾಡುತ್ತಿದ್ದರು.ಸಂದೀಪ್ ಸಾವಿನ ಸುದ್ದಿ ತಿಳಿದು ಅವರ ಸ್ನೇಹಿತರು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಅನುಮಾನಾಸ್ಪದ ಸಾವು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!