Wednesday, May 8, 2024
Homeತಾಜಾ ಸುದ್ದಿಬ್ಯಾಂಕ್ ಗಳಿಗೆ ಜಿಲ್ಲಾ ಪಂಚಾಯಿತಿ ಸಿಇಓ ಕಟ್ಟುನಿಟ್ಟಿನ ಆದ್ಯತೆ; ಸಾಲ ಅರ್ಜಿ ಆದ್ಯತೆ ಮೇರೆಗೆ ವಿಲೇವಾರಿ

ಬ್ಯಾಂಕ್ ಗಳಿಗೆ ಜಿಲ್ಲಾ ಪಂಚಾಯಿತಿ ಸಿಇಓ ಕಟ್ಟುನಿಟ್ಟಿನ ಆದ್ಯತೆ; ಸಾಲ ಅರ್ಜಿ ಆದ್ಯತೆ ಮೇರೆಗೆ ವಿಲೇವಾರಿ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ವಿವಿಧ ಸಾಲ ಯೋಜನೆಗಳ ಅಡಿ ಸಲ್ಲಿಕೆಯಾದ ಅರ್ಜಿಗಳು ತಿಂಗಳಾನುಗಟ್ಟಲೆ ಬಾಕಿ ಇರುವುದು ಒಳ್ಳೆಯದಲ್ಲ. ಇಂತಹ ಅರ್ಜಿಗಳನ್ನು ಬ್ಯಾಂಕ್‌ಗಳು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು ಸೋಮವಾರದಂದು ಏರ್ಪಡಿಸಿದ್ದ ಜಿಲ್ಲಾ ಸಮಾಲೋಚನಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ’ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಸಾಲ ಪಡೆಯಲು ಸಲ್ಲಿಕೆಯಾದ ಅರ್ಜಿಗಳನ್ನು ಬ್ಯಾಂಕ್‌ಗಳು ತಿರಸ್ಕರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇದು ಸರಿಯಲ್ಲ. ಈ ಯೋಜನೆಯಡಿ ಇದುವರೆಗೆ ತಿರಸ್ಕೃತವಾದ ಎಲ್ಲ ಅರ್ಜಿಗಳನ್ನೂ ಮರುಪರಿಶೀಲಿಸಬೇಕು. ಮುಂದಿನ ಸಭೆಗೆ ಇದರ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಸಾಲ ಅರ್ಜಿಗಳನ್ನು ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣವನ್ನೂ ಬ್ಯಾಂಕ್‌ಗಳು ನೀಡಬೇಕು ಎಂದು ಸೂಚಿಸಿದರು’ ಎಂದು ಸೂಚಿಸಿದರು.

‘ಸ್ವಸಹಾಯ ಸಂಘಗಳ ಸದಸ್ಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೆ. ಅವರ ಯಾವುದೇ ಸಾಲಗಳ ಮರುಪಾವತಿ ಬಾಕಿ ಉಳಿಯುವುದಿಲ್ಲ. ಸ್ವಸಹಾಯ ಸಂಘಗಳ ಸದಸ್ಯರು ಸಾಲಕ್ಕೆ ಅರ್ಜಿ ಸಲ್ಲಿಸಿದರೆ ತ್ವರಿತವಾಗಿ ಮಂಜೂರು ಮಾಡಬೇಕು’ ಎಂದು ಸಲಹೆ ನೀಡಿದರು.

ರುಡ್ ಸೆಟ್ ಸಂಸ್ಥೆ ಬಗ್ಗೆ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಮಾಹಿತಿ ಇಲ್ಲದ ಬಗ್ಗೆಯೂ ಸಿಇಒ ಬೇಸರ ವ್ಯಕ್ತಪಡಿಸಿದರು.`ಬ್ಯಾಂಕ್‌ಗಳು ಮೊದಲು ಸಮಾಜಿಕ ಹೊಣೆಗಾರಿಕೆಯನ್ನಿ ನಿರ್ವಹಿಸಬೇಕು. ಉದ್ಯಮ ಆರಂಭಿಸಲು ಸಾಲ ಕೋರಿ ಬ್ಯಾಂಕ್‌ಗೆ ಬರುವ ನಿರುದ್ಯೋಗಿ ಯುವಕರನ್ನು ಉಜಿರೆಯ ರುಡ್‌ಸೆಟ್‌ ಸಂಸ್ಥೆಯ ವಸತಿಯುಕ್ತ ತರಬೇತಿಗಾಗಿ ಅಧಿಕಾರಿಗಳು ಕಳುಹಿಸಿಕೊಡಬೇಕು’ ಎಂದರು.

- Advertisement -
spot_img

Latest News

error: Content is protected !!