Friday, May 17, 2024
Homeಕರಾವಳಿಗೇರು ಅಭಿವೃದ್ಧಿ ನಿಗಮದಿಂದ 'ಮನೆಗೊಂದು ಗೇರು ಗಿಡ' ಕಾರ್ಯಕ್ರಮ

ಗೇರು ಅಭಿವೃದ್ಧಿ ನಿಗಮದಿಂದ ‘ಮನೆಗೊಂದು ಗೇರು ಗಿಡ’ ಕಾರ್ಯಕ್ರಮ

spot_img
- Advertisement -
- Advertisement -

ಮಂಗಳೂರು: ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಗೇರು ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಮನೆಗೊಂದು ಗೇರು ಗಿಡ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ನಿಗಮ ನೂತನ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದರು.

ಸೋಮವಾರದಂದು ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮಮತಾ ಗಟ್ಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ‘ಈ ಬಗ್ಗೆ ಪ್ರಸ್ತಾವ ಸಿದ್ಧಪಡಿಸಿ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಂತಿನ ನಿರ್ಧಾರ ಕೈಗೊಳ್ಳಲಿದ್ದೇವೆ,’ ಎಂದರು.

ಗೇರು ಬೆಳೆಗೆ ಉತ್ತೇಜನ ನೀಡಲು ಕರಾವಳಿಯ ಮೂರೂ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಜಿಲ್ಲಾ ಮಟ್ಟದಲ್ಲೂ ಕಾರ್ಯಾಗಾರ ನಡೆಸಲಿದ್ದೇವೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 25,630 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ. ಗೇರು ಬೆಳೆಯುವ ಪ್ರದೇಶದ ವಿಸ್ತೀರ್ಣದಲ್ಲಿ ಕರ್ನಾಟಕವು ದೇಶದಲ್ಲಿ ಐದನೇ ಸ್ಥಾನ ಹಾಗೂ ಗೇರುಬೀಜ ಉತ್ಪಾದನೆಯಲ್ಲಿ ಅರನೇ ಸ್ಥಾನದಲ್ಲಿದೆ. ನಿಗಮವು ಗೇರು ತೋಪುಗಳನ್ನು ಬೆಳೆಸಲು ಉತ್ತೇಜನ ನೀಡುತ್ತಾ ಬಂದಿದೆ’ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕೆ ಮಾತನಾಡಿ, ‘ರಾಜ್ಯದಲ್ಲಿ 53 ಸಾವಿರ ಟನ್ ಕಚ್ಚಾ ಗೇರುಬೀಜ ಉತ್ಪಾದನೆಯಾಗುತ್ತಿದ್ದು. ಇದರಲ್ಲಿ ನಿಗಮದ ಗೇರು ತೋಪುಗಳ ಪಾಲು 616 ಟನ್‌ಗಳಷ್ಟಿದೆ. ನಮ್ಮದೇಶದಲ್ಲಿ ಹೆಕ್ಟೇರ್‌ಗೆ ಸರಾಸರಿ 700 ಟನ್‌ ಗೇರು ಉತ್ಪಾದನೆಯಾದರೆ, ರಾಜ್ಯ ದಲ್ಲಿ ಈ ಪ್ರಮಾಣ 450 ಟನ್ ಮಾತ್ರ ಇದೆ. ಹವಾಮಾನ, ಭೌಗೋಳಿಕತೆ ಹಾಗೂ ಮಣ್ಣಿನಲ್ಲಿರುವ ಪೋಷಕಾಂಶಗಳಿಗೆ ಅನುಗುಣವಾಗಿ ಗೇರು ಇಳುವರಿ ಬರುತ್ತದೆ,’ ಎಂದು ತಿಳಿಸಿದರು.

‘ನಿಗಮದ 1 ಸಾವಿರ ಹೆಕ್ಟೇ‌ಗಳಷ್ಟು ಗೇರು ತೋಪುಗಳ ಪುನರುಜ್ಜಿವನಕ್ಕೆ ಕಳೆದ ಸೆಪ್ಟೆ೦ಬರ್‌ನಲ್ಲಿ 72 ಕೋಟಿ ಅನದಾನ ಬಿಡುಗಡೆಯಾಗಿದೆ. ಇದರ ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಗೇರು ತೋಪು ಪುನರುಜ್ಜಿವನ ಮತ್ತು ಗೇರು ನರ್ಸರಿ ಅಭಿವೃದ್ಧಿಗೆ ಅರ್‌ಕವಿ ಅಡಿ ನಿಗಮಕ್ಕೆ 71.89 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

‘ಗೇರುಬೀಜದಿ೦ದ ಸಸಿ ಮಾಡಿದ ಗಿಡಗಳನ್ನು ಹಿಂದೆ ಗೇರು ತೋಪುಗಳಲ್ಲಿ ನಾಟಿ ಮಾಡಲಾಗಿತ್ತು. ಕಸಿ ಮಾಡಿದ ಗಿಡಗಳು ಹೆಚ್ಚು ಇಳುವರಿ ನೀಡುವುದಲ್ಲದೇ, ಬಾಳಿಕೆಯೂ ಜಾಸ್ತಿ. ಹಾಗಾಗಿ ಗೇರು ತೋಪುಗಳ ಪುನರುಜೀವನದ ವೇಳೆ ಕಸಿ ಗಿಡಗಳನ್ನೇ ಬಳಸಲಿದ್ದೇವೆ’ ಎಂದರು.

- Advertisement -
spot_img

Latest News

error: Content is protected !!