Tuesday, May 7, 2024
Homeಕ್ರೀಡೆಧನಶ್ರೀ ವರ್ಮಾ ಅವರೊಂದಿಗೆ ಯಜುವೇಂದ್ರ ಚಹಾಲ್ ನಿಶ್ಚಿತಾರ್ಥ

ಧನಶ್ರೀ ವರ್ಮಾ ಅವರೊಂದಿಗೆ ಯಜುವೇಂದ್ರ ಚಹಾಲ್ ನಿಶ್ಚಿತಾರ್ಥ

spot_img
- Advertisement -
- Advertisement -

ನವದೆಹಲಿ: ಟೀಂ ಇಂಡಿಯಾ ಪ್ರೀಮಿಯರ್‌ ಸ್ಪಿನ್ನರ್‌ ಯಜ್ವೇಂದ್ರ ಚಹಲ್‌ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಕೊರೊನಾ ವೈರಸ್‌ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿರುವ ಚಹಲ್‌, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಲೆಗ್‌ ಸ್ಪಿನ್ನರ್‌ ಯಜ್ವೇಂದ್ರ ಚಹಲ್‌ ಅವರು ತಮ್ಮ ಭಾವಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. “ನಮ್ಮ ಕುಟುಂಬದೊಂದಿಗೆ ನಾವು ಹೇಳುತ್ತೇವೆ “ಹೌದು” #rokaceremony,’ ಎಂದು ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಹಂಚಿಕೊಂಡಿರುವ ಹಲವು ಫೋಟೊಗಳಿಗೆ ಶೀರ್ಷಿಕೆಯನ್ನು ಕೊಟ್ಟಿದ್ದಾರೆ.

ನಿಶ್ಚಿತಾರ್ಥಕ್ಕೂ ಮೊದಲು ಚಹಲ್, ತಮ್ಮ ಜತೆಗಾರ್ತಿ ಧನಶ್ರೀ ವರ್ಮಾ ಅವರೊಂದಿಗೆ ಕೆಲವು ಜೂಮ್ ಕಾರ್ಯಾಗಾರಗಳಲ್ಲಿ ಕಾಣಿಸಿಕೊಂಡಿದ್ದರು. ಧನಶ್ರೀ ವರ್ಮಾ ಅವರು ವೈದ್ಯ ಮತ್ತು ನೃತ್ಯ ಸಂಯೋಜಕರಾಗಿರುವುದಲ್ಲದೆ, ಯೂಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದಾರೆ.

- Advertisement -
spot_img

Latest News

error: Content is protected !!