- Advertisement -
![]()
- Advertisement -
ಬೆಳ್ಳಾರೆ; ಯುವಕನೊಬ್ಬ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಪೆರ್ಲಂಪಾಡಿಯಲ್ಲಿ ನಡೆದಿದೆ. ಮಹೇಶ್ (31) ಮೃತ ವ್ಯಕ್ತಿ.
ಮಹೇಶ್ ಕೆಲಸಕ್ಕೆಂದು ಕೇರಳದಿಂದ ಬಂದಿದ್ದರು ಎನ್ನಲಾಗಿದೆ. ಜು.14ರಂದು ಪೆರ್ಲಂಪಾಡಿಯ ಹೊಳೆಯ ದಡದ ಮರವೊಂದರಲ್ಲಿ ಮಹೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಮಹೇಶ್ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಮನೆಯ ಸಮೀಪವಿದ್ದ ಹೊಳೆಯ ದಡದಲ್ಲಿ ಮೃತ ದೇಹ ಪತ್ತೆಯಾಗಿದೆ. ಸದ್ಯ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿ, ಮೃತದೇಹವನ್ನು ಪರಿಶೀಲನೆ ನಡೆಸಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
- Advertisement -


