
ಸುಳ್ಯ: ಇಲಿಪಾಷಾಣ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕಲ್ಪಡ ಕೊಡಿಯಾಲ ಗ್ರಾಮದ ಇಪ್ಪುಳ್ತಡಿ ನಿವಾಸಿ ಆಶಿತ್ (25) ಮೃತಪಟ್ಟ ಯುವಕ.
ಡಿ. 5 ರಂದು ಆಶಿತ್ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದ. ಅಲ್ಲಿಂದ ಚಾಲಕನಾಗಿ ಹೈದರಾಬಾದ್ ಗೆ ಹೋದಾಗ ವಾಂತಿ ಶುರುವಾಗಿದೆ. ಅಲ್ಲಿಯ ಸ್ಥಳೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಬಳಿಕ ಅತನ ಜೊತೆಗೆ ಇದ್ದವರು ಆತನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
ಯುವಕನ ಅರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಕುಟುಂಬಸ್ಥರು ಡಿ.10ರಂದು ಬೆಂಗಳೂರಿಗೆ ಹೋಗಿ ಊರಿಗೆ ಕರೆದುಕೊಂಡು ಬಂದಿದ್ದಾರೆ. ಡಿ. 11 ರಂದು ಆಶಿತ್‌ನನ್ನು ಪುತ್ತೂರಿನ ಆದರ್ಶ ಅಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಹೋದಾಗ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ವೈದ್ಯರು ಸಮಾಲೋಚನೆ ನಡೆಸಿದಾಗ ತಾನು ಡಿ.5 ರಂದು ಇಲಿಪಾಷಾಣವನ್ನು ಸೇವಿಸಿದ್ದಾಗಿ ತಿಳಿಸಿದ್ದಾನೆ.
ಅದರಂತೆ ಆತನನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಿತ್ ಚಿಕಿತ್ಸೆ ಫಲಕಾರಿಯಾಗದೇ ಡಿ. 13ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 32/2025 ಕಲಂ: 194 BNSS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ. ಇಲಿಪಾಷಾಣ ಯಾತಕ್ಕಾಗಿ ಸೇವಿಸಿದ್ದ ಎಂಬುವುದು ಸ್ಪಷ್ಟವಾಗಿಲ್ಲ.


